ಸ್ಟಾಪ್ ನಿಫ್ಟಿ ಹಾಗೂ ಬ್ಯಾಂಕ್ ನಿಫ್ಟಿ ಸೂಚ್ಯಂಕದ ನವೀಕೃತ ಬೆಲೆಯನ್ನ ತೋರಿಸೋದನ್ನ ನಿಲ್ಲಿಸಿದ್ದರಿಂದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರೀಯ ಷೇರು ಸೂಚ್ಯಂಕದ ವಹಿವಾಟನ್ನ ಸ್ಥಗಿತಗೊಳಿಸಲಾಗಿತ್ತು.
ಎನ್ಎಸ್ಇ ಎರಡು ಸೇವಾ ಪೂರೈಕೆದಾರರ ಜೊತೆ ಟೆಲಿಕಾಂ ಸಂಪರ್ಕವನ್ನ ಹೊಂದಿದೆ. ಈ ಎರಡು ಲಿಂಕ್ಗಳಲ್ಲಿ ಸಮಸ್ಯೆ ಉಂಟಾದ ಕಾರಣ ಎನ್ಎಸ್ಇ ವಹಿವಾಟನ್ನ ಸ್ಥಗಿತಗೊಳಿಸಲಾಗಿದೆ ಎಂದು ಎನ್ಎಸ್ಇ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
ನಾವು ಸಾಧ್ಯವಾದಷ್ಟು ಬೇಗ ಈ ವ್ಯವಸ್ಥೆಯನ್ನ ಮರುಸ್ಥಾಪಿಸುವ ಕೆಲಸವನ್ನ ಮಾಡುತ್ತಿದ್ದೇವೆ. 11.40ರವರೆಗೆ ಎಲ್ಲಾ ವಿಭಾಗದ ವಹಿವಾಟುಗಳನ್ನ ಮುಚ್ಚಲಾಗಿದೆ ಹಾಗೂ ಈ ಸಮಸ್ಯೆ ಪರಿಹಾರವಾಗುತ್ತಿದ್ದಂತೆಯೇ ವಹಿವಾಟು ಮತ್ತೆ ಆರಂಭಗೊಳ್ಳಲಿದೆ ಎಂದು ಎನ್ಎಸ್ಇ ಮಾಹಿತಿ ನೀಡಿತ್ತು. ಇದೀಗ ಸಮಸ್ಯೆ ಸರಿಯಾಗಿದೆ ಎಂದು ತಿಳಿದುಬಂದಿದೆ.