ಕೊರೊನಾ ವೈರಸ್ ಇಡೀ ವಿಶ್ವಕ್ಕೆ ಬಂದಪ್ಪಳಿಸಿ ವರ್ಷಗಳೇ ಕಳೆದಿದ್ದರೂ ಇನ್ನೂ ಕೂಡ ಈ ಸಾಂಕ್ರಾಮಿಕದಿಂದ ಪೂರ್ಣ ಪ್ರಮಾಣದಿಂದ ಪಾರಾಗೋಕೆ ಜಗತ್ತಿನಿಂದ ಸಾಧ್ಯವಾಗಿಲ್ಲ.
ಈ ನಡುವೆ ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ಕೊರೊನಾ ವೈರಸ್ ಹರಡುತ್ತಿರುವ ವೇಳೆಯಲ್ಲಿ ಮಾಂಸ ಭಕ್ಷಕ ಇನ್ನೊಂದು ವೈರಾಣು ಕೂಡ ಜನರಲ್ಲಿ ನಡುಕ ಹುಟ್ಟಿಸಿತ್ತು ಎಂಬ ಭಯಾನಕ ಅಂಶ ಬಯಲಾಗಿದೆ.
ಆಡಮ್ ನೋವೆಲ್ ಎಂಬವರು ಮೊದಲು ಇದನ್ನ ಸೊಳ್ಳೆಯ ಕಡಿತ ಎಂದೇ ಭಾವಿಸಿದ್ದರು. ಆದರೆ ಕ್ರಮೇಣ ಅವರ ಹಿಮ್ಮಡಿಯಲ್ಲಿ ಕೆಂಪು ಬಣ್ಣದ ಕಲೆಯೊಂದು ಉದ್ಭವವಾಗಿತ್ತು. ಇದು ವಾಸಿಯೇ ಆಗದ್ದನ್ನ ನೋಡಿ ನೋವೆಲ್ ಆಸ್ಪತ್ರೆಗೂ ಭೇಟಿ ನೀಡಿದ್ದರು. ಆದರೆ ಈ ವೇಳೆ ವೈದ್ಯರು ಅಲರ್ಜಿ ಇರಬಹುದೆಂದು ಭಾವಿಸಿದ್ದರು. ಎರಡು ವಾರದ ಬಳಿಕ ಈ ಗಾಯದ ಕಲೆ ರಂಧ್ರವಾಗಿ ಮಾರ್ಪಟ್ಟಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಈ ವಿಚಿತ್ರ ಘಟನೆ ವರದಿಯಾಗಿದೆ. ಈತನನ್ನ ಪರೀಕ್ಷಿಸಿದ ವೈದ್ಯರು ಗಾಯ ಬೇಗನೇ ವಾಸಿಯಾಗುತ್ತೆ ಎಂಬ ಭರವಸೆ ಹೊಂದಿದ್ದರು. ಆದರೆ ಟೇಬಲ್ ಟೆನ್ನಿಸ್ ಚೆಂಡಿನ ಗಾತ್ರಕ್ಕೆ ಈ ರಂಧ್ರ ದೊಡ್ಡದಾಗಿದೆ. ಸಾಕಷ್ಟು ಪರೀಕ್ಷೆ ಬಳಿಕ ಇದೊಂದು ಮಾಂಸ ಭಕ್ಷಕ ಬ್ಯಾಕ್ಟೀರಿಯಾದ ಕಾರ್ಯ ಎಂಬ ಭಯಾನಕ ವಿಚಾರ ಬಯಲಾಗಿದೆ. ಇದನ್ನ ಸರಿಯಾದ ಸಮಯಕ್ಕೆ ಪರೀಕ್ಷೆ ಮಾಡಿಸದೇ ಹೋದಲ್ಲಿ ಶಾಶ್ವತ ದಿವ್ಯಾಂಗಕ್ಕೆ ರೋಗಿ ಒಳಗಾಗುವ ಸಾಧ್ಯತೆ ಇದೆ.
ಬುರುಲಿ ಅಲ್ಸರ್ ಎಂಬ ಈ ಸಮಸ್ಯೆ ಆಸ್ಟ್ರೇಲಿಯಾದಲ್ಲಿ ಸದ್ದಿಲ್ಲದೇ ಕ್ರಮೇಣವಾಗಿ ಹೆಚ್ಚುತ್ತಿದೆ. ತಮ್ಮದೇ ಆಸ್ಪತ್ರೆಯಲ್ಲಿ ವಾರದಲ್ಲಿ ಇಂತಹ 5 – 10 ಕೇಸ್ಗಳನ್ನ ನೋಡ್ತಿರೋದಾಗಿ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.