
ಕಾರ್ನ್ ಫ್ಲೇಕ್ಗಳ ಪೊಟ್ಟಣವೊಂದರ ಮೂಲಕ ಕೊಕೇನ್ ಸಾಗಾಟ ಮಾಡುವ ಯತ್ನವೊಂದನ್ನು ಅಮೆರಿಕದ ಓಹಿಯೋ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿ ವಿಫಲಗೊಳಿಸಿದ್ದಾರೆ.
ದಕ್ಷಿಣ ಅಮೆರಿಕಾದಿಂದ ಹಾಂಕಾಂಗ್ಗೆ ಸಾಗಿಸಲ್ಪಡುತ್ತಿದ್ದ 44 ಪೌಂಡ್ಗಳಷ್ಟಿದ್ದ ಕೊಕೇನ್ ಕೋಟೆಡ್ ಕಾರ್ನ್ ಫ್ಲೇಕ್ಸ್ಅನ್ನು ಸಿನ್ಸಿನಾಟಿಯಲ್ಲಿರುವ ಅಮೆರಿಕ ಕಸ್ಟಮ್ಸ್ ಹಾಗೂ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬರ್ತಡೇಯಂದು ತಾಯಿ ತಯಾರಿಸಿದ ಕೇಕ್ ಕಂಡ ಪುತ್ರನಿಗೆ ಶಾಕ್..!
ಫೆಬ್ರವರಿ 13ರಂದು ಪೆರುವಿನಿಂದ ಆಗಮಿಸಿದ್ದ ಸರಕನ್ನು ಮೂಸಿ ನೋಡುತ್ತಿದ್ದ ಪತ್ತೆದಾರಿ ಶ್ವಾನ ಬಿಕೋ ಈ ಪ್ಯಾಕೇಜ್ಗಳ ಬಗ್ಗೆ ಅಧಿಕಾರಿಗಳಿಗೆ ಅಲರ್ಟ್ ಮಾಡಿದ್ದಾನೆ. ಇದೇ ಸುಳಿವಿನ ಮೇಲೆ ಕೆಲಸ ಮಾಡಿದ ಸಿಬ್ಬಂದಿಗೆ ಬಿಳಿ ಬಣ್ಣದ ಪುಡಿ ಭರಿತವಾದ ಕಾರ್ನ್ ಫ್ಲೇಕ್ಸ್ ಪೊಟ್ಟಣಗಳು ಸಿಕ್ಕಿವೆ. ಮಾದಕ ದ್ರವ್ಯದ ಇರುವಿಕೆಯ ಪರೀಕ್ಷೆ ಮಾಡಿದಾಗ ಪಾಸಿಟಿವ್ ಕಂಡು ಬಂದಿದೆ.