ಮಂಗಳನ ಅಂಗಳದಲ್ಲಿ ನಾಲ್ಕು ಲ್ಯಾಂಡಿಂಗ್ಗಳನ್ನು ಯಶಸ್ವಿಯಾಗಿ ಪೂರೈಸಿದ ತಂಡದ ಭಾಗವಾಗಿ ಕೆಲಸ ಮಾಡಿರುವ ನಾಸಾದ ಮುಖ್ಯ ಇಂಜಿನಿಯರ್ ಅಲೆಜಾಂಡ್ರೋ ಮಿಗುಯೆಲ್ ಸ್ಯಾನ್ ಮಾರ್ಟಿನ್, ಕಳೆದ ವಾರ ಪರ್ಸಿವರೆನ್ಸ್ ಲ್ಯಾಂಡಿಂಗ್ ಆಗುವ ವೇಳೆ ತಮ್ಮ ಮಗಳ ಬಾಲ್ಯದ ಬೆಡ್ರೂಂನಲ್ಲಿ ಕುಳಿತು ಈ ಐತಿಹಾಸಿಕ ಸಾಧನೆಯನ್ನು ಮಗುವಿನಂತೆ ವೀಕ್ಷಿಸಿದ್ದಾರೆ.
ಸ್ಯಾನ್ ಮಾರ್ಟಿನ್ರ ಈ ವಿಡಿಯೋವನ್ನು ಅವರ ಪುತ್ರಿ ಮೆಡೆಲಿನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ….?
ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದಾಗಿ ತಮ್ಮ ಮಗಳ ಬಾಲ್ಯದ ಕೋಣೆಯನ್ನೇ ಕಂಟ್ರೋಲ್ ರೂಂ ಮಾಡಿಕೊಂಡಿದ್ದ ಸ್ಯಾನ್ ಮಾರ್ಟಿನ್, ಪರ್ಸಿವರೆನ್ಸ್ನ ಕಾರ್ಯಾಚರಣೆಯನ್ನು ನಿಯಂತ್ರಿಸುವ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಮಿಶನ್ ಯಶಸ್ವಿಯಾಗಿ ಮುಗಿಯುತ್ತಲೇ ಮಗುವಿನಂತೆ ಕುಣಿದಾಡಿದ ಸ್ಯಾನ್, ತಮ್ಮ ತಂಡದ ಇತರ ಮಂದಿಯೊಂದಿಗೆ ವರ್ಚುವಲ್ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
https://www.instagram.com/p/CLc6AD1ly_b/?utm_source=ig_embed