ರೈಲ್ವೇ/ಬಸ್/ಟ್ರಾಮ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡಿಕೊಂಡು, ಚಿಲ್ಲರೆ ಕಾಸಿಗೆ ಸಿಕ್ಕ ಕೆಲಸ ಮಾಡಿಕೊಂಡು ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದ 50ಕ್ಕೂ ಹೆಚ್ಚು ಮಕ್ಕಳಿಗೆ ಹೊಸ ಬದುಕು ಕೊಟ್ಟ ವಾರಣಾಸಿಯ ದಂಪತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಆಶಿಶ್ ಸಿಂಗ್ ಹಾಗೂ ಅವರ ಪತ್ನಿ ಪೂಜಾ ಈ ಮಕ್ಕಳ ಬಾಳಿನಲ್ಲಿ ಹೊಸ ಬೆಳಕು ತಂದಿದ್ದಾರೆ. 2000ನೇ ಇಸವಿಯಲ್ಲಿ ಕಾನ್ಪುರ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪೂರೈಸಿದ ಆಶಿಶ್, ಕಾಶಿಯ ಬೀದಿ ಬೀದಿಗಳಲ್ಲಿ ಡ್ರಗ್ ವ್ಯಸನರಾದ ಮಕ್ಕಳನ್ನು ಪತ್ತೆ ಮಾಡಿ, ಅವರಿಗೆ ಪುನಃಶ್ಚೇತನದ ವ್ಯವಸ್ಥೆ ಮಾಡಿದ್ದಾರೆ.
ಆಶಿಶ್ ಹಾಗೂ ಪೂಜಾ ರೈಲ್ವೇ/ ಬಸ್ ನಿಲ್ದಾಣಗಳ ಬಳಿ ಸಿಗುವ ಮಾದಕ ವ್ಯಸನಿ ಮಕ್ಕಳನ್ನು ಪತ್ತೆ ಮಾಡಿ, ತಮ್ಮ ’ಕುಟುಂಬ್’ ಎನ್‌ಜಿಓ ಮೂಲಕ ಅವರಿಗೊಂದು ಹೊಸ ಬದುಕು ಕಟ್ಟಿಕೊಡಲು ಮಾನವೀಯ ಸೇವೆ ಮಾಡುತ್ತಾ ಬಂದಿದ್ದಾರೆ. 2002ರಿಂದಲೂ ಈ ದಂಪತಿಯ ಆದರ್ಶಮಯ ಸೇವೆ ನಡೆದುಕೊಂಡು ಬಂದಿದೆ.
ದಂಪತಿಗಳ ಈ ಸ್ಟೋರಿಯನ್ನು ’ಹ್ಯೂಮನ್ಸ್ ಆಫ್ ವಾರಣಾಸಿ’ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ.
https://www.facebook.com/officialhumansofvns/posts/239660484509839