ಜಾಸ್ಮಿನ್ ಹ್ಯಾರಿಸನ್ ಎಂಬಾಕೆ ಅತಿ ಚಿಕ್ಕ ವಯಸ್ಸಿನಲ್ಲಿ ಅಟ್ಲಾಂಟಿಕ್ ಸಮುದ್ರದಲ್ಲಿ ಏಕಾಂಗಿ ಯಾನ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. 21 ವರ್ಷ ವಯಸ್ಸಿನಲ್ಲೇ ಈ ಈಜುಪಟು ಅಟ್ಲಾಂಟಿಕ್ ಸಾಗರವನ್ನ ಪರ್ಯಟನೆ ಮಾಡಿದ್ದಾಳೆ.
ಈ ಏಕಾಂಗಿ ಯಾನ ಪೂರ್ಣಗೊಳಿಸಲು ಜಾಸ್ಮಿನ್ 70 ದಿನಗಳನ್ನ ತೆಗೆದುಕೊಂಡಿದ್ದಾಳೆ. 2 ಗಂಟೆಗಳ ಕಾಲ ಸಾಗರ ಸುತ್ತಿ ಇನ್ನೆರಡು ಗಂಟೆ ನಿದ್ದೆ ಮಾಡುವ ಮೂಲಕ ಈಕೆ ಸಮುದ್ರ ಯಾನ ಮಾಡಿದ್ದಾಳೆ.
ಈ ಸಮಯದಲ್ಲಿ ಈಕೆ ಎಲ್ಲರೊಂದಿಗೂ ಸಂಪರ್ಕವನ್ನ ಕಡಿದುಕೊಂಡಿದ್ದಳು. ಸ್ಯಾಟ್ಲೈಟ್ ಫೋನ್ ಮೂಲಕ ತಾಯಿಗೆ ನಿತ್ಯ ಕರೆ ಮಾಡುತ್ತಿದ್ದಳು ಎನ್ನಲಾಗಿದೆ.
70 ದಿನಗಳ ಅವಧಿಯಲ್ಲಿ ಜಾಸ್ಮಿನ್ ಬರೋಬ್ಬರಿ 3000 ಮೈಲಿ ಕ್ರಮಿಸಿದ್ದಾಳೆ. ಸಾಮಾನ್ಯವಾಗಿ ಇಂತಹ ಪ್ರಯಾಣದ ವೇಳೆ ದಿನಸಿ ಸಾಮಗ್ರಿಗಳನ್ನ ಕೊಂಡೊಯ್ತಾರೆ. ಆದರೆ ಈಕೆ ಮಾತ್ರ ತನ್ನ ಜರ್ನಿ ಮುಗಿಯೋದ್ರೊಳಗೆ 40 ಕೆಜಿ ಚಾಕಲೇಟ್ ಹಾಗೂ ಬಿಸ್ಕಟ್ಗಳನ್ನ ತಿಂದು ಮುಗಿಸಿದ್ದಾಳಂತೆ.