ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರೂ ಅದು ಟ್ರೆಂಡ್ ಆಗಿಬಿಡುತ್ತೆ. ಇದೀಗ 13 ವರ್ಷಗಳ ಹಿಂದೆ ಎಲಾನ್ ಮಸ್ಕ್, ಟೆಸ್ಲಾ ಕಾರುಗಳು ಏಕೆ ದುಬಾರಿಯಾಗಿದೆ ಎಂಬುದನ್ನ ವಿವರಿಸುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.
ಎಲಾನ್ ಮಸ್ಕ್ರ ಟೆಸ್ಲಾ ಕಾರುಗಳನ್ನ ಇದೀಗ ವಿಶ್ವದ ಪ್ರತಿಷ್ಠಿತ ಕಾರುಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಹಿಂದೆ ಟೆಸ್ಲಾಗೆ ಇಷ್ಟೊಂದು ಒಳ್ಳೆಯ ಮಾರುಕಟ್ಟೆ ಇರಲಿಲ್ಲ.
2008ರಲ್ಲಿ ಟೆಸ್ಲಾ ಕಂಪನಿ ನಷ್ಟದಲ್ಲಿದ್ದ ವೇಳೆ ಮಸ್ಕ್ ಇದು ನನ್ನ ಜೀವನದ ಅತ್ಯಂತ ಕೆಟ್ಟ ವರ್ಷ ಎಂದು ಹೇಳಿಕೊಂಡಿದ್ದರು. ದಿ ಹಾಲಿವುಡ್ ಹಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 300 ಪ್ರೇಕ್ಷಕರ ಎದುರು ನಿಂತು ಮಸ್ಕ್ ಟೆಸ್ಲಾ ಬಗ್ಗೆ ಮಾತನಾಡಿದ್ದರು.
https://twitter.com/teslaownersSV/status/1363663311376556035?ref_src=twsrc%5Etfw%7Ctwcamp%5Etweetembed%7Ctwterm%5E1363663311376556035%7Ctwgr%5E%7Ctwcon%5Es1_&ref_url=https%3A%2F%2Fkannadadunia.com%2Fwp-admin%2Fpost.php%3Fpost%3D545534action%3Dedit