ನವದೆಹಲಿ: ಬ್ಯಾಂಕ್ ಗಳಲ್ಲಿ ಹಣವಿಡುವುದಕ್ಕಿಂತ ಅದೇ ಹಣವನ್ನು ಅಂಚೆ ಇಲಾಖೆಯಲ್ಲಿ ಮಂತ್ಲಿ ಇನ್ ಕಮ್ ಸ್ಕೀಮ್ ಮೇಲೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಬಡ್ಡಿ ಹಣವನ್ನು ಪಡೆಯಬಹುದು. ಇಂಥಹ ಅದ್ಭುತ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ.
ಹೌದು. 1 ಲಕ್ಷ ರೂಪಾಯಿ ಹಣವನ್ನು 5 ವರ್ಷದ ಅವಧಿಗೆ ಪೋಸ್ಟ್ ಆಫೀಸ್ ನಲ್ಲಿ Monthly Income Scheme ನಡಿ ಹೂಡಿಕೆ ಮಾಡುವುದರಿಂದ ತಿಂಗಳಿಗೆ 550 ರೂ. ಇಂಟ್ರಸ್ಟ್ ಅಥವಾ ಬಡ್ಡಿ ಹಣ ಸಿಗಲಿದೆ. ಅಂದರೆ ವರ್ಷಕ್ಕೆ 6,600 ರೂ. ನಿಮ್ಮದಾಗಲಿದೆ. ಈ ಯೋಜನೆ ಪ್ರಕಾರ ಶೇ.6.6ರಷ್ಟು ಬಡ್ಡಿ ಹಾಗೂ 5 ವರ್ಷದ ಬಳಿಕ ನೀವು ಹೂಡಿಕೆ ಮಾಡಿದ ಮೂಲ ಹಣ ಸಿಗಲಿದೆ. ಈ ಸ್ಕೀಂ ನಲ್ಲಿ 4.5 ಲಕ್ಷ ಹೂಡಿಕೆ ಮಾಡಬಹುದು.
SBI ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: PoS ಯಂತ್ರವಾಗಿ ಬದಲಾಗಲಿದೆ ಸ್ಮಾರ್ಟ್ ಫೋನ್
ಹಾಗಾದರೆ ಈ ಸ್ಕೀಂ ನ ಖಾತೆ ತೆರೆಯುವುದು ಹೇಗೆ..? ಇಲ್ಲಿದೆ ವಿವರ:
ಮೊಬೈಲ್ ಮೂಲಕವೂ ಖಾತೆ ತೆಗೆಯಬಹುದಾಗಿದ್ದು, 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಲ್ಲೂ ಈ ಸ್ಕೀಂ ನಲ್ಲಿ ಖಾತೆ ತೆರೆಯಬಹುದಾಗಿದೆ.
* ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು
* ಅಕೌಂಟ್ ಮೇಲೆ ಕ್ಲಿಕ್ಕಿಸಿ ಪಾನ್ ಕಾರ್ಡ್ ಅಥವಾ ಆಧಾರ್ ನಂಬರ್ ನಮೂದಿಸಿ
* ರಿಜಿಸ್ಟರ್ಡ್ ಫೋನ್ ನಂಬರ್ ನಲ್ಲಿ ಬರುವ ಒಟಿಪಿ ಹಾಕಿ
* ನಿಮ್ಮ ಮಾಹಿತಿಗಳನ್ನು ನೀಡಿ
* ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿದ ಬಳಿಕ ಸಬ್ ಮಿಟ್ ಕ್ಲಿಕ್ ಮಾಡಿ
* ಕೆಲ ಸಮಯದಲ್ಲಿಯೇ ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆ ಓಪನ್ ಆಗಿರುತ್ತದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಡಿಜಿಟಲ್ ಸೇವಿಂಗ್ಸ್ ಖಾತೆ ಒಂದು ವರ್ಷವಷ್ಟೇ ಸೀಮಿತವಾಗಿರುತ್ತದೆ. ಬಯೋಮೆಟ್ರಿಕ್ ಪ್ರಮಾಣ ಪೂರ್ಣಗೊಂಡ ಬಳಿಕ ಮತ್ತೆ ಚಾಲ್ತಿಯಲ್ಲಿರುತ್ತದೆ.