alex Certify ಈ ಕಾರಣಕ್ಕೆ ವೈರಲ್​ ಆಗಿದೆ ಡೊಮಿನೋಸ್​ ಸಿಬ್ಬಂದಿ ಫೋಟೋ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವೈರಲ್​ ಆಗಿದೆ ಡೊಮಿನೋಸ್​ ಸಿಬ್ಬಂದಿ ಫೋಟೋ…..!

ಹೊರಗಡೆ ಮಳೆ ಬರ್ತಿದೆ ಅಂದರೆ ನೀವು ಮನೆಯಿಂದ ಹೊರಗೆ ಹೋಗುವ ಮನಸ್ಸನ್ನ ಮಾಡೋದಿಲ್ಲ. ಬದಲಾಗಿ ಮನೆಯಲ್ಲೇ ಕೂತು ಒಳ್ಳೊಳ್ಳೆ ತಿಂಡಿಗಳನ್ನ ಆರ್ಡರ್​ ಮಾಡ್ತೀರಾ..! ಆದರೆ ಡೆಲಿವರಿ ಬಾಯ್​ಗಳ ಕತೆಯೇನು..? ಚಳಿ – ಮಳೆ – ಗಾಳಿಯನ್ನು ಲೆಕ್ಕಿಸದೇ ಸರಿಯಾದ ಜಾಗಕ್ಕೆ ಸರಿಯಾದ ಸಮಯದಲ್ಲಿ ಆಹಾರವನ್ನ ತಲುಪಿಸುವ ಜವಾಬ್ದಾರಿ ಅವರ ಮೇಲಿರುತ್ತೆ.

ಪಿಜ್ಜಾ, ಬರ್ಗರ್​ಗಳನ್ನ ತಯಾರಿಸುವ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಒತ್ತಡ ಎಷ್ಟಿರುತ್ತೆ ಅನ್ನೋದನ್ನ ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಟೆಕ್ಸಾಸ್​​ನ ಡೋಮಿನೋಸ್​ನಲ್ಲಿ ತೆಗೆದ ಫೋಟೋ ಇದಾಗಿದೆ. ಚಳಿಗಾಲ ವಿಪರೀತ ಇರೋದ್ರ ಹಿನ್ನೆಲೆ ಮನೆಯಿಂದ ಹೊರಬಾರದ ಜನತೆ ಫುಡ್​ ಆರ್ಡರ್​ ಮಾಡ್ತಿದ್ದಾರೆ. ಆದರೆ ಹವಾಮಾನ ವೈಪರಿತ್ಯದಿಂದಾಗಿ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೇ ಈ ಸಿಬ್ಬಂದಿ ಒತ್ತಡಕ್ಕೆ ಸಿಲುಕಿದ್ದಾರೆ.

ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್:‌ ಬಿಯರ್‌ ಹೀರುತ್ತ ಕುಳಿತ ಅಪರಿಚಿತನ ಮಾತು ಕೇಳಿ ದಂಗಾದ ಮನೆಯೊಡತಿ

ಎಮಿಲಿ ಬ್ಯುಕುಮ್​ ಎಂಬ ಟ್ವಿಟರ್​​ನಲ್ಲಿ ಶೇರ್​ ಮಾಡಿದ ಫೋಟೋ ಇದಾಗಿದೆ. ಈ ಫೋಟೋ ಪೋಸ್ಟ್ ಮಾಡಿದ್ದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

— Emily Baucum (@EmilyBaucum) February 18, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...