ಬ್ಯಾಂಕ್ ಹಾಗೂ ಎನ್.ಬಿ.ಎಫ್.ಸಿ.ಗಳ ನಡುವೆ ಕೂದಲೆಳೆಯ ಅಂತರವಿದೆ. ಬ್ಯಾಂಕ್ಗಳು ಉತ್ತಮ ಬಡ್ಡಿ ದರವನ್ನ ನೀಡುತ್ತವೆ. ಆದರೆ ಎನ್ಬಿಎಫ್ಸಿಗಳು ಹೆಚ್ಚಿನ ಮೊತ್ತವನ್ನ ಸಾಲದ ರೂಪದಲ್ಲಿ ನೀಡ್ತಾರೆ. ಹೀಗಾಗಿ ನೀವು ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಬ್ಯಾಂಕ್ ಹಾಗೂ ಎನ್ಬಿಎಫ್ಸಿಗಳ ನಡುವಿನ ವ್ಯತ್ಯಾಸವನ್ನ ಅರಿಯಲೇಬೇಕು.
ಉದಾಹರಣೆಗೆ ಸಾಲಗಾರನ ಬಳಿ 20 ಗ್ರಾಂ ತೂಕದ ಚಿನ್ನದ ಸರ ಇದೆ ಎಂದಿಟ್ಟುಕೊಳ್ಳೋಣ. ಆತ ಆ ಸರವನ್ನ ಗಿರವಿಯಿಟ್ಟು ಹಣ ಪಡೆಯಲು ಬಯಸಿದ್ದರೆ ಬ್ಯಾಂಕ್ ಹಾಗೂ ಎನ್ಬಿಎಫ್ಸಿಗಳೆರಡೂ ಆತನಿಗೆ ಚಿನ್ನದ ಮೌಲ್ಯದ 75 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಹಣವನ್ನ ನೀಡುತ್ತವೆ. ಅಂದರೆ 10 ಗ್ರಾಂ ಚಿನ್ನಕ್ಕೆ ಬ್ಯಾಂಕ್ನಲ್ಲಿ 46,500 ರೂಪಾಯಿ ಸಿಕ್ಕಿದ್ರೆ , ಎನ್ಬಿಎಫ್ಸಿನಲ್ಲಿ ಇದಕ್ಕೂ ಹೆಚ್ಚಿನ ಹಣ ಸಿಗಲಿದೆ.
ಚಿನ್ನವನ್ನ ಗಿರವಿ ಇಡಬೇಕು ಅಂದರೆ ಅದು ಕನಿಷ್ಟ 18 ಕ್ಯಾರೆಟ್ ಶುದ್ಧತೆಯನ್ನ ಹೊಂದಿರಲೇಬೇಕು. ಇದಕ್ಕಿಂತ ಕಡಿಮೆ ಶುದ್ಧತೆಯುಳ್ಳ ಚಿನ್ನವನ್ನ ತೆಗೆದುಕೊಳ್ಳಲಾಗೋದಿಲ್ಲ. ಅಲ್ಲದೇ ಚಿನ್ನವನ್ನ ತೂಕ ಹಾಕುವ ವೇಳೆ ಅದರಲ್ಲಿರುವ ಹರಳು, ಮುತ್ತು, ಹವಳಗಳನ್ನ ಪರಿಗಣನೆ ಮಾಡೋದಿಲ್ಲ ಅನ್ನೋದನ್ನೂ ನೆನಪಿನಲ್ಲಿಡಬೇಕು.
ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ಪಿಎಂ ಯೋಜನೆ ಸಾಲ: ನಕಲಿ ಲೋನ್ ವೆಬ್ಸೈಟ್ ಗಳ ಬಗ್ಗೆ ಇರಲಿ ಎಚ್ಚರ
ಇನ್ನು ಚಿನ್ನದ ನಾಣ್ಯಗಳ ವಿಚಾರಕ್ಕೆ ಬಂದರೆ ಬ್ಯಾಂಕ್ ಹಾಗೂ ಎನ್ಬಿಪಿಎಸ್ಗಳು ಹೆಚ್ಚಿನ ಶುದ್ಧತೆಯನ್ನ ಕೇಳಬಹುದು. ಹಾಗೂ ಚಿನ್ನದ ನಾಣ್ಯದ ತೂಕದ ಮೇಲೆ ನಿರ್ಬಂಧ ಹೇರಲೂಬಹುದು. ಅನೇಕ ಕಡೆ 50 ಗ್ರಾಂಗಿಂತ ಹೆಚ್ಚಿನ ತೂಕದ ಚಿನ್ನದ ನಾಣ್ಯಗಳನ್ನ ಸ್ವೀಕರಿಸೋದಿಲ್ಲ.
ಇನ್ನು ಹೆಚ್ಚಿನ ಸಾಲದಾತರು ಪೂರ್ವಪಾವತಿ ಶುಲ್ಕವನ್ನ ಸ್ವೀಕರಿಸೋದಿಲ್ಲ. ಒಂದು ವೇಳೆ ಕೆಲವರು ಈ ಶುಲ್ಕವನ್ನ ಸ್ವೀಕರಿಸಿದ್ದರೂ ಸಹ ಕೇವಲ 1 ಪ್ರತಿಶತದಷ್ಟು ಕೇಳಬಹುದು. ಇನ್ನು ಕೆಲವು ಕಡೆ ಮೌಲ್ಯಮಾಪನಾ ಶುಲ್ಕ ಹಾಗೂ ಸಂಸ್ಕರಣಾ ಶುಲ್ಕಗಳನ್ನ ವಿಧಿಸುವ ಸಾಧ್ಯತೆ ಇದೆ.