ಮೈಸೂರು: ಶ್ರೀರಾಮ ಜನರ ಧಾರ್ಮಿಕ ನಂಬಿಕೆಯ ಸಂಕೇತ. ನಾನೂ ಕೂಡ ನನ್ನ ಹುಟ್ಟೂರಿನಲ್ಲಿ ರಾಮ ಮಂದಿರವನ್ನು ಕಟ್ಟಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಹುಟ್ಟೂರಿನಲ್ಲಿ ನಾನು ರಾಮ ಮಂದಿರ ನಿರ್ಮಿಸುತ್ತಿದ್ದು, ಜನರು ಇದಕ್ಕೆ ದೇಣಿಗೆ ನೀಡುತ್ತಿದ್ದಾರೆ. ಎಲ್ಲಾ ಕಡೆ ರಾಮ ಮಂದಿರ ನಿರ್ಮಿಸುತ್ತಾರೆ. ಅದರಲ್ಲಿ ತಪ್ಪೇನಿದೆ? ದೇವರು ಜನರ ಭಯ, ಭಕ್ತಿ, ನಂಬಿಕೆಯ ಸಂಕೇತ ಇದನ್ನು ಅವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಹೆಚ್ಚಿದ ಕೊರೊನಾ ಭೀತಿ: ಲಸಿಕೆ ತೆಗೆದುಕೊಳ್ಳಲು ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯಕ್ಕೆ ಸಚಿವ ಸುಧಾಕರ್ ಗರಂ
ಇದೇ ವೇಳೆ ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರವಾಗಿ ಮಾತನಾಡಿದ ಅವರು, ಜನರು ರಾಮ ಮಂದಿರಕ್ಕೆ ದೇಣಿಗೆ ನೀಡುತ್ತಾರೆ. ಅದು ಬಿಜೆಪಿಗಲ್ಲ. ಹಾಗಾಗಿ ಲೆಕ್ಕ ಕೇಳುವ ಅಧಿಕಾರ ನನಗಿದೆ. ಕಾರಣ ನಾನು ಈ ದೇಶದ ಪ್ರಜೆ. ನಾನು ದುಡ್ಡು ಕೊಡಲಿ, ಬಿಡಲಿ ಲೆಕ್ಕ ಕೊಡುವುದು ಅವರ ಕೆಲಸ. ಕೇಳುವುದು ನಮ್ಮ ಹಕ್ಕು. ಈ ಹಿಂದೆಯೂ ಅವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ ಎಂದು ಹೇಳಿದರು.