ಟಿವಿ, ಸ್ಮಾರ್ಟ್ ಫೋನ್ ಹಾಗೂ ಗೇಮಿಂಗ್ಗಳನ್ನ ಹೆಚ್ಚಾಗಿ ನೋಡುವ ಮಕ್ಕಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಹೆಚ್ಚಾಗಿ ಸುಳಿಯುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ. 13 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹದಿ ಹರೆಯದವರಲ್ಲಿ ಈ ರೀತಿಯ ಆಲೋಚನೆಗಳು ಸುಳಿಯುತ್ತದೆ ಎನ್ನಲಾಗಿದೆ.
ಮನರಂಜನಾ ಅಪ್ಲಿಕೇಶನ್ಗಳು ಹರೆಯದ ಹೆಣ್ಣು ಮಕ್ಕಳಿಗೆ ಅಪಾಯಕಾರಿಯಾಗಿದ್ದರೆ, ರೀಡಿಂಗ್ ಅಪ್ಲಿಕೇಶನ್ಗಳು ಹರೆಯದ ಗಂಡು ಮಕ್ಕಳಿಗೆ ಅಪಾಯಕಾರಿ. ಸೈಬರ್ ಬೆದರಿಕೆಗಳಿಂದಾಗಿ ಈ ಆತ್ಮಹತ್ಯೆಯ ಆಲೋಚನೆಗಳು ಸುಳಿದಾಡುತ್ತದೆ ಎಂದು ಅಧ್ಯಯನ ಹೇಳಿದೆ.
ʼಆಲಿವ್ ಆಯಿಲ್ʼ ಮಕ್ಕಳಿಗೆ ಎಷ್ಟು ಒಳ್ಳೆಯದು…..?
ಬ್ರಿಗಮ್ ಯುವ ಯೂನಿವರ್ಸಿಟಿ ಸ್ಕೂಲ್ ಆಫ್ ಫ್ಯಾಮಿಲಿ ಲೈಫನ್ ಸಹಾಯಕ ನಿರ್ದೇಶಕ ಸಾರಾ ಕೊಯೆನ್ ಕೂಡ ಈ ವಿಚಾರವಾಗಿ ಮಾತನಾಡಿದ್ದು ಹದಿ ಹರೆಯದವರಿಗೆ ಹಚ್ಚು ಸಮಯದ ಕಾಲ ಟಿವಿ, ಮೊಬೈಲ್ ಹಾಗೂ ಕಂಪ್ಯೂಟರ್ ಸ್ಕ್ರೀನ್ಗಳ ಮೇಲೆ ಕುಳಿತುಕೊಳ್ಳೋದು ನಕಾರಾತ್ಮಕ ಅನುಭವಗಳಿಗೆ ಕಾರಣವಾಗಬಹುದು ಎಂದಿದ್ದಾರೆ.