
ನಾಸಾದ ’ಪರ್ಸಿವರೆನ್ಸ್’ ರೋವರ್ ಮಂಗಳನ ಅಂಗಳದಲ್ಲಿ ಗುರುವಾರದಂದು ಯಶಸ್ವಿಯಾಗಿ ಲ್ಯಾಂಡ್ ಆಗಿದೆ.
ರೋವರ್ ಅನ್ನು ತನ್ನ ನಿಗದಿತ ಸ್ಥಳದಲ್ಲಿ ಲ್ಯಾಂಡ್ ಆಗುವಂತೆ ನಿರ್ದೇಶಿಸುವಲ್ಲಿ ಕೆಲಸ ಮಾಡಿದವರ ಪೈಕಿ ಭಾರತೀಯ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಪಾತ್ರ ದೊಡ್ಡದಿದೆ.
ನಾಸಾದ ಜೆಟ್ ನಿಯಂತ್ರಣ ಪ್ರಯೋಗಾಲಯದಲ್ಲಿ ಕುಳಿತು ರೋವರ್ ಅನ್ನು ನಿಯಂತ್ರಿಸುತ್ತಿದ್ದ ಸ್ವಾತಿ ಮೋಹನ್, ಗುರುವಾರ ಮಧ್ಯಾಹ್ನ 3:55ಕ್ಕೆ ’ಟಚ್‌ಡೌನ್’ ಖಾತ್ರಿಯಾಗಿದೆ ಎನ್ನುತ್ತಲೇ ಅಲ್ಲಿದ್ದ ವಿಜ್ಞಾನಿಗಳ ತಂಡ ಸಂಭ್ರಮದಲ್ಲಿ ಮಿಂದೆದ್ದಿದೆ. ಈ ವೇಳೆ ಸ್ವಾತಿ ಹಣೆಯಲ್ಲಿ ಪುಟ್ಟದೊಂದು ಬಿಂದಿ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ದೇಸೀ ನೆಟ್ಟಿಗರು ಭಾರೀ ಖುಷಿಯಾಗಿದ್ದಾರೆ.
ವಾಹನಗಳ ಮೇಲೆ ಜಾತಿ ಬೋರ್ಡ್ ಹಾಕಿಕೊಂಡ್ರೆ ಬೀಳುತ್ತೆ ಫೈನ್..!
ತಮಗೆ ಒಂದು ವರ್ಷ ವಯಸ್ಸಾಗಿದ್ದ ವೇಳೆ ಹೆತ್ತವರೊಂದಿಗೆ ಭಾರತದಿಂದ ಅಮೆರಿಕಕ್ಕೆ ಬಂದ ಸ್ವಾತಿ, ಇಲ್ಲಿನ ಉತ್ತರ ವರ್ಜೀನಿಯಾ ಹಾಗೂ ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಬೆಳೆದಿದ್ದಾರೆ.