ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಗರಿಷ್ಠ ತಲಾ ಆದಾಯವನ್ನು ಹೊಂದಿದ್ದ ಅಸ್ಸಾಂ ನ್ನು ಸ್ವಾತಂತ್ರಾ ನಂತರದ ಸರ್ಕಾರಗಳು ನಿರ್ಲಕ್ಷ ಮಾಡುತ್ತಾ ಬಂದಿದ್ದು, ಇದೀಗ ತಮ್ಮ ಸರ್ಕಾರ ಈ ಪ್ರಮಾದವನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುರುವಾರದಂದು ವಿಡಿಯೋ ಕಾನ್ಫರೆನ್ಸ್ ಮೂಲಕ 3,231 ಕೋಟಿ ರೂಪಾಯಿ ವೆಚ್ಚದ ‘ಮಹಾಬಾಹು ಬ್ರಹ್ಮಪುತ್ರ’ ಜಲಸಾರಿಗೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬ್ರಹ್ಮಪುತ್ರ ಕೇವಲ ನದಿಯಲ್ಲ ಅದು ಅಸ್ಸಾಂನ ಅಸ್ಮಿತೆ ಎಂದು ಬಣ್ಣಿಸಿದರು.
BIG NEWS: ಹೊರೆಯಾಗಿ ಪರಿಣಮಿಸಿದೆ ‘ವರ್ಕ್ ಫ್ರಮ್ ಹೋಂʼ – ಅವಧಿ ಮೀರಿ ಕೆಲಸ ಮಾಡಿ ದಣಿಯುತ್ತಿದ್ದಾರೆ ಉದ್ಯೋಗಿಗಳು
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಸ್ಸಾಂ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದು, ಇದೀಗ ತಮ್ಮ ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.