alex Certify ಅರಬ್ಬಿ ಸಮುದ್ರದಲ್ಲಿ 36 ಕಿಮೀ ಈಜಿದ 12ರ ಬಾಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಬ್ಬಿ ಸಮುದ್ರದಲ್ಲಿ 36 ಕಿಮೀ ಈಜಿದ 12ರ ಬಾಲೆ…!

Image result for 12-Year-Old Mumbai Girl with Autism Sets Record by Swimming 36 Km to Gateway of India in 8 Hours

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ 12 ವರ್ಷದ ಬಾಲಕಿಯೊಬ್ಬಳು ಬಾಂದ್ರಾ ವರ್ಲಿ ಸೇತುವೆಯಿಂದ ಗೇಟ್‌ ವೇ ಆಫ್ ಇಂಡಿಯಾವರೆಗೂ ಈಜುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ.

ಸೇಲರ್‌ ಮದನ್ ರವಿ ಪುತ್ರಿಯಾದ ಜಿಯಾ ರೈ, 8 ಗಂಟೆ 40 ನಿಮಿಷಗಳ ಅವಧಿಯಲ್ಲಿ 36 ಕಿಮೀ ಈಜುವ ಮೂಲಕ ಈ ಸಾಧನೆಗೈದಿದ್ದಾಳೆ. ಆಟಿಸಂ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಯಾ ಅರಬ್ಬಿ ಸಮುದ್ರದಲ್ಲಿ ಈ ಮ್ಯಾರಾಥಾನ್ ಈಜಿನಲ್ಲಿ ಭಾಗಿಯಾಗಿದ್ದಾಳೆ.

ಬಸಂತ್‌ ಪಂಚಮಿಯಂದು ಯೋಧರಿಂದ ಬೊಂಬಾಟ್‌ ಡಾನ್ಸ್

ಜಿಯಾಳ ಈ ಸಾಧನೆಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಗ್ರೇಟರ್‌ ಮುಂಬಯಿಯ ಜಲಕ್ರೀಡಾ ಸಂಘದ ಅಧ್ಯಕ್ಷ ಜರೀರ್‌ ಎನ್‌ ಬಲಿವಾಲಾ ಅವರು ಜಿಯಾಳನ್ನು ಸನ್ಮಾನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...