ಜಮ್ಮು-ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆ ಹಿನ್ನೆಲೆಯಲ್ಲಿ 1990 ರಲ್ಲಿ ಮುಚ್ಚಲ್ಪಟ್ಟಿದ್ದ ದೇಗುಲದ ಬಾಗಿಲು 31 ವರ್ಷಗಳ ಬಳಿಕ ತೆರೆದಿದ್ದು, ಮೊದಲ ಬಾರಿಗೆ 30 ಕಾಶ್ಮೀರಿ ಪಂಡಿತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ.
ಶ್ರೀನಗರದ ಕ್ರಲ್ ಖೂಡ್ ಪ್ರದೇಶದಲ್ಲಿರುವ ಶೀತಲ್ ನಾಥ್ ದೇವಾಲಯದ ಬಾಗಿಲನ್ನು ಮಂಗಳವಾರದಂದು ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ ತೆರೆಯಲಾಗಿದೆ. ಈ ವೇಳೆ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಗಿದೆ.
ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಮೀನಾಕ್ಷಿ ಭವನದಲ್ಲಿ ಉಪಹಾರ ಸವಿದ ಸಿಎಂ
ದೇವಾಲಯದ ಬಾಗಿಲು ತೆರೆದಿರುವುದು ಅಲ್ಲಿನ ಜನತೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿರುವುದರ ಪ್ರತೀಕವಾಗಿದೆ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.