ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಮುಖದ ಅಂದ ಹೆಚ್ಚಿಸಲು ಬಳಸುತ್ತಾರೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿದರೆ ತ್ವಚೆ ಹೊಳೆಯುತ್ತದೆ. ಹಾಗೇ ಇದನ್ನು ಕೂದಲಿನ ಆರೈಕೆಗೆ ಕೂಡ ಬಳಸಬಹುದು. ಎಣ್ಣೆಯುಕ್ತ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಮುಲ್ತಾನಿ ಮಿಟ್ಟಿ ಬಳಸಿ ಈ ಫೇಸ್ ಪ್ಯಾಕ್ ತಯಾರಿಸಿ.
‘ಲೈಂಗಿಕಾಸಕ್ತಿ’ ಹೆಚ್ಚಿಸುತ್ತೆ ಈ ಆಹಾರ
1 ಕಪ್ ನೀರಿನಲ್ಲಿ ಮುಲ್ತಾನಿ ಮಿಟ್ಟಿ 3 ಚಮಚ, ಅಂಟುವಾಳ ಕಾಯಿ ಪೌಡರ್ 3 ಚಮಚ ನೆನೆಸಿ ಬಳಿಕ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೆ 3 ಬಾರಿ ಮಾಡಿ. ಇದು ನೆತ್ತಿಯ ಕೊಳೆಯನ್ನು ತೆಗೆದುಹಾಕುತ್ತದೆ. ಹಾಗೇ ನೆತ್ತಿಯ ಹೆಚ್ಚುವರಿ ತೈಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.