ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಖಾತೆದಾರರು ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಧಾರ್ ಲಿಂಕ್ ಗೆ ಗಡುವು ನೀಡಿದ್ದಾರೆ. ಮಾರ್ಚ್ 31ರೊಳಗೆ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಇದನ್ನು ಗಮನದಲ್ಲಿಟ್ಟುಕೊಂಡಿರುವ ಎಸ್‌ಬಿಐ, ವಿವಿಧ ಆಯ್ಕೆಗಳನ್ನು ನೀಡಿದೆ. ಅದರ ಮೂಲಕ ಖಾತೆದಾರರು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡಬಹುದು. ಆನ್ಲೈನ್ ಮೂಲಕ ಆಧಾರ್ ಲಿಂಕ್ ಮಾಡಬಹುದು. ಮೊದಲು www.onlinesbi.com ವೆಬ್ಸೈಟ್ ಗೆ ಹೋಗಬೇಕು. ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಆಗಬೇಕು. ಇ-ಸೇವೆಯ ಬ್ಯಾಂಕ್ ಖಾತೆ ಜೊತೆ ಆಧಾರ್ ನವೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಪ್ರೊಫೈಲ್ ಪಾಸ್ವರ್ಡ್ ದೃಢೀಕರಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು. ನಂತ್ರ ಡ್ರಾಪ್ ಡೌನ್ ಪಟ್ಟಿಯಲ್ಲಿ ಸಿಐಎಫ್ ಸಂಖ್ಯೆ ಆಯ್ಕೆ ಮಾಡಿ ಆಧಾರ್ ಸಂಖ್ಯೆ ನಮೂದಿಸಿ. ನಂತ್ರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿದ್ರೆ ತಕ್ಷಣ ನಿಮ್ಮ ಖಾತೆಗೆ ಆಧಾರ್ ಲಿಂಕ್ ಆಗುತ್ತದೆ. ಇದ್ರ ಬಗ್ಗೆ ಮೊಬೈಲ್ ನಲ್ಲಿ ಸಂದೇಶ ಬರಲಿದೆ.
ಒಂದು ವೇಳೆ ನಿಮ್ಮ ಬಳಿ ನೆಟ್ ಬ್ಯಾಂಕಿಂಗ್ ಇಲ್ಲವೆಂದ್ರೆ ಎಟಿಎಂ ಮೂಲಕ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ಪಿನ್ ಹಾಕಿದ ನಂತ್ರ ಸೇವಾ ನೋಂದಣಿ ಆಯ್ಕೆ ಟ್ಯಾಪ್ ಮಾಡಿ. ಅಲ್ಲಿ ಆಧಾರ್ ನೋಂದಣಿ ಆಯ್ಕೆ ಮಾಡಿಕೊಂಡು ನಿಮ್ಮ ಖಾತೆ ವಿಧಾನವನ್ನು ಆಯ್ಕೆ ಮಾಡಿ. ನಂತ್ರ ಆಧಾರ್ ನಂಬರ್ ಹಾಕಿ ಸಲ್ಲಿಸಿ.
ಹೋಂಡಾ ಕಂಪನಿಯ ಹೊಸ ವಿನ್ಯಾಸದ ಬೈಕ್ ಮಾರುಕಟ್ಟೆಗೆ
ಮೊಬೈಲ್ ಅಪ್ಲಿಕೇಷನ್ ಮೂಲಕ ಕೂಡ ಆಧಾರ್ ಲಿಂಕ್ ಮಾಡಬಹುದು. ಎಸ್ಬಿಐ ಅಪ್ಲಿಕೇಷನ್ ಮೊಬೈಲ್ ನಲ್ಲಿ ಡೌನ್ಲೋಡ್ ಆಗಿದ್ದರೆ ಇದು ಸುಲಭ. ಅಪ್ಲಿಕೇಷನ್ ನಲ್ಲಿ ಆಧಾರ್ ಆಯ್ಕೆ ಮಾಡಿ ಆಧಾರ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ನಲ್ಲಿ ಸಿಐಎಫ್ ಸಂಖ್ಯೆ ಹಾಕಿ. ನಂತ್ರ ಆಧಾರ್ ನಂಬರ್ ಹಾಕಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಎಸ್ಎಂಎಸ್ ಮೂಲಕ ಕೂಡ ನೀವು ಆಧಾರ್ ಲಿಂಕ್ ಮಾಡಬಹುದು. ಯುಐಡಿ ಸ್ಪೇಸ್ ಆಧಾರ್ ಸಂಖ್ಯೆ ಸ್ಪೇಸ್ ಖಾತೆ ಸಂಖ್ಯೆಯನ್ನು ಟೈಪ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 567676ಗೆ ಎಸ್ಎಂಎಸ್ ಕಳುಹಿಸಿ. ಬ್ಯಾಂಕ್ ಇದನ್ನು ಅಂಗೀಕರಿಸಿದ್ರೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ.
ಬ್ಯಾಂಕ್ ಶಾಖೆಗೆ ಹೋಗಿಯೂ ನೀವು ಆಧಾರ್ ನಂಬರ್ ನೋಂದಾಯಿಸಬಹುದು. ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಅರ್ಜಿ ಭರ್ತಿ ಮಾಡಿ, ಸಿಬ್ಬಂದಿಗೆ ನೀಡಿ. ಸಿಬ್ಬಂದಿ ಖಾತೆ ಜೊತೆ ಆಧಾರ್ ಲಿಂಕ್ ಮಾಡುತ್ತಾರೆ.