ಕಪೂರ್ ಮನೆತನದ ರಾಜೀವ್ ಕಪೂರ್ ಫೆಬ್ರವರಿ 9ನೇ ತಾರೀಖಿನಂದು ಹೃದಾಯಾಘಾತದಿಂದ ನಿಧನರಾಗಿದ್ದರು ಎಂಬ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಆದರೆ ರಾಜೀವ್ ಕಪೂರ್ ನಿಧನರಾದ ವಾರದಲ್ಲೇ ಕಪೂರ್ ಕುಟುಂಬ ಔತಣ ಕೂಟ ನಡೆಸಿದ್ದು ಅನೇಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಿವುಡ್ ನಟ ರಣಬೀರ್ ಕಪೂರ್ ಜನ್ಮದಿನದ ಪ್ರಯುಕ್ತ ಆಲಿಯಾ ಭಟ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್ , ತಾರಾ ಸುತಾರಿಯಾ ಸೇರಿದಂತೆ ಅನೇಕರಿಗೆ ರಣಬೀರ್ ಕಪೂರ್ ಕಳೆದ ರಾತ್ರಿ ಔತಣ ಕೂಟ ಆಯೋಜಿಸಿದ್ದಾರೆ. ರಾಜೀವ್ ಕಪೂರ್ ನಿಧನದ ಸುದ್ದಿ ಮಾಸುವ ಮುನ್ನವೇ ಈ ರೀತಿ ಪಾರ್ಟಿ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಕಪೂರ್ ಕುಟುಂಬಸ್ಥರು ಪಾರ್ಟಿಯಲ್ಲಿ ಎಂಜಾಯ್ ಮಾಡ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರು. ಇವರ ಮನೆಯಲ್ಲಿ ಸಾವು ಸಂಭವಿಸಿದೆ. ಆದರೆ ಇಲ್ಲಿ ಬರ್ತಡೇ ಪಾರ್ಟಿ ನಡೆಯುತ್ತಿದೆ. ಇವರ ಭಾವನೆಗಳೆಲ್ಲ ಎಷ್ಟು ಬೇಗ ಬದಲಾಗಿ ಬಿಡುತ್ತೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.instagram.com/p/CLStE8nBlmn/?utm_source=ig_web_copy_link
https://www.instagram.com/p/CLStdI2Bci6/?utm_source=ig_web_copy_link