ಶರ್ಟ್ ಬಟನ್ ಒಟ್ಟುಗೂಡಿಸಿದವನಿಗೆ ವಿಶ್ವ ದಾಖಲೆಯ ಪಟ್ಟ 15-02-2021 3:15PM IST / No Comments / Posted In: Latest News, International ಅಂಗಿಗಳ ಅಂದ ಹೆಚ್ಚಲೆಂದು ಕಫ್ಲಿಂಕ್ಸ್ಗಳನ್ನ ಅಳವಡಿಸ್ತಾರೆ. ಕಂಫ್ಲಿಂಕ್ಸ್ಗಳು ಅಂದರೆ ಮತ್ತೇನಲ್ಲ ಅಂದವಾದ ಬಟನ್ಗಳು. ಅನೇಕರಿಗೆ ಈ ಅಂದವಾದ ಶರ್ಟ್ ಗುಂಡಿಗಳನ್ನ ಸಂಗ್ರಹ ಮಾಡೋದೇ ಹವ್ಯಾಸವಾಗಿದೆ. ಆದರೆ ಇದೇ ಹವ್ಯಾಸವನ್ನ ಇಟ್ಟುಕೊಂಡ ವ್ಯಕ್ತಿಯೊಬ್ಬರು ಇದೀಗ ವಿಶ್ವ ದಾಖಲೆಯನ್ನೇ ನಿರ್ಮಾಣ ಮಾಡಿದ್ದಾರೆ. ಕಾರ್ಲ್ ಎಂಬ ಹೆಸರಿನ ವ್ಯಕ್ತಿ ಈವರೆಗೆ 1925 ಬಗೆಯ ಕಫ್ಲಿಂಕ್ಸ್ನ್ನು ಒಟ್ಟು ಮಾಡಿದ್ದಾರೆ. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಹೆಸರನ್ನ ನೋಂದಾಯಿಸಿದ್ದಾರೆ. ಜೇಬಿನಲ್ಲಿ ಹಣವಿಲ್ಲವೆಂದ್ರೂ ಬ್ಯುಸಿನೆಸ್ ಶುರು ಮಾಡಲು ನೆರವಾಗಲಿದ್ದಾರೆ ಈ ನಟ 2019ರಲ್ಲೇ ಕಾರ್ಲ್ ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಿದ್ದರು. ಹಾಗೂ ದಾಖಲೆಯನ್ನ ಪರಿಶೀಲನೆ ಮಾಡಲಿಕ್ಕೋಸ್ಕರ, ಕಫ್ಲಿಂಕ್ಗಳನ್ನ ಎಣಿಕೆ ಮಾಡಲು ಅಕ್ಕಸಾಲಿಗನನ್ನ ನೇಮಿಸಿಕೊಂಡರು. ಹಾಗೂ ಪ್ರತಿಯೊಂದು ಕಫ್ಲಿಂಕ್ಗಳ ಬಗ್ಗೆ ಲಿಖಿತ ವಿವರಣೆ ನೀಡಿದ್ದಾರೆ.