ನವದೆಹಲಿ: ಹೆದ್ದಾರಿಗಳ ಟೋಲ್ ಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಒಂದು ವೇಳೆ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಟೋಲ್ ವಿಧಿಸಲಾಗುತ್ತಿದೆ.
ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದು, ಫಾಸ್ಟ್ಯಾಗ್ ಕುರಿತು ಈಗಾಗಲೇ ಮೂರು ಬಾರಿ ಗಡುವು ನೀಡಲಾಗಿತ್ತು. ಆದಾಗ್ಯೂ ವಾಹನ ಸವಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಕಟ್ಟು ನಿಟ್ಟಾಗಿ ನಿಯಮ ಜಾರಿಗೆ ತರಲಾಗುತ್ತಿದ್ದು, ಇಂದು ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಇ-ಪೇಮೆಂಟ್ ಸೌಲಭ್ಯವಿರುವ ಫಾಸ್ಟ್ಯಾಗ್ ಅನ್ನು ವಾಹನ ಮಾಲೀಕರು ಕೂಡಲೇ ಪಡೆದುಕೊಳ್ಳಬೇಕು.
ಗೂಗಲ್ ಮ್ಯಾಪ್ಗೆ ಠಕ್ಕರ್ ನೀಡಲು ಬಂತು ಸ್ವದೇಶಿ ನಿರ್ಮಿತ ʼಭುವನ್ʼ
ಈ ಮೊದಲು ಎಲ್ಲಾ ನಾಲ್ಕು ಚಕ್ರವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆಯನ್ನು ಜನವರಿ 1ರಿಂದ ಕಡ್ಡಾಯಗೊಳಿಸಲಾಗಿತ್ತು. ಆದರೆ ಕೆಲ ವಾಹನ ಮಾಲೀಕರು ಫಾಸ್ಟ್ಯಾಗ್ ಅಳವಡಿಸದ ಕಾರಣ ಫೆ.15ರವರೆಗೆ ಡೆಡ್ ಲೈನ್ ವಿಸ್ತರಿಸಲಾಯಿತು.