ಶ್ವಾನ ಮಾನವನ ಸಹಚರ ಎಂಬ ಮಾತು ಯುಗ ಯುಗಗಳಿಂದ ನಡೆದುಕೊಂಡು ಬರ್ತಿದೆ. ಇದೀಗ ಕೋವಿಡ್ ವಿರುದ್ಧದ ಹೋರಾಟದಲ್ಲೂ ಈ ಶ್ವಾನಗಳು ನಮಗೆ ನೆರವಾಗುತ್ತವಾ ಎಂಬ ಪ್ರಶ್ನೆ ಮೂಡಿದೆ. ಹೊಸ ಅಧ್ಯಯನವೊಂದರ ಪ್ರಕಾರ ನಿರ್ದಿಷ್ಟ ವೈದ್ಯಕೀಯ ತರಬೇತಿ ಪಡೆದ ನಾಯಿಗಳು ತಮ್ಮ ಗ್ರಹಿಕ ಸಾಮರ್ಥ್ಯದ ಮೂಲಕ ಜನರಿಗೆ ಸ್ಕ್ರೀನಿಂಗ್ ಟೆಸ್ಟ್ ನಡೆಸಬಲ್ಲವು ಎಂದು ಹೇಳಲಾಗ್ತಿದೆ.
ಇತ್ತೀಚೆಗಷ್ಟೇ ನಡೆಸಿದ ಸಂಶೋಧನೆಯ ಪ್ರಕಾರ ಶ್ವಾನಗಳು ಕೊರೊನಾ ಪಾಸಿಟಿವ್ ರೋಗಿಗಳನ್ನ ಗ್ರಹಿಕೆಯ ಮೂಲಕವೇ ಪತ್ತೆ ಹಚ್ಚಬಲ್ಲವಂತೆ. ಅಲ್ಲದೇ ಅತ್ಯಂತ ತ್ವರಿತವಾಗಿ ಹಾಗೂ ನಿಖರವಾಗಿ ಫಲಿತಾಂಶವನ್ನ ನೀಡಬಲ್ಲವು ಎಂದು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಟಾಮಿ ಡಿಕ್ಕಿ ಹೇಳಿದ್ದಾರೆ.
ಒಂದು ನಾಯಿ ಎರಡು ಬಾರಿ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾಗಿದ್ದನ್ನ ದೃಢೀಕರಿಸಿತ್ತು. ಆ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ವಾರದ ಬಳಿಕ ಬಂದಿದ್ದು ಇದರಲ್ಲಿಯೂ ಕೂಡ ಪಾಸಿಟಿವ್ ಎಂದೇ ಇದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಶ್ವಾನಗಳಿಗೆ ವಾಸನೆಯ ಮೂಲಕವೇ ಸೋಂಕನ್ನ ಕಂಡುಹಿಡಿಯುವ ವಿಶೇಷ ಶಕ್ತಿ ಇದೆ ಎಂದು ಜರ್ನಲ್ ಆಫ್ ಆಸ್ಟಿಯೋಥಪಿಕ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ.