‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..! 13-02-2021 3:15PM IST / No Comments / Posted In: Latest News, India, Live News ವಿಶ್ವ ರೇಡಿಯೋ ದಿನವಾದ ಇಂದು ಓಡಿಶಾದ ಪೂರಿಯ ಕಲಾವಿದನೊಬ್ಬ 3000 ಬೆಂಕಿ ಕಡ್ಡಿಯನ್ನ ಬಳಕೆ ಮಾಡಿ ರೇಡಿಯೋ ಕಲಾಕೃತಿ ನಿರ್ಮಿಸಿದ್ದಾರೆ. ಕಲಾವಿದ ಸಾಸ್ವತ್ ರಂಜನ್ ಸಾಹೂ ಈ ಕಲಾಕೃತಿಯನ್ನ ನಿರ್ಮಾಣ ಮಾಡೋಕೆ 4 ದಿನಗಳನ್ನ ತೆಗೆದುಕೊಂಡ್ರು. ಇದು ಪ್ಯಾನಾಸೋನಿಕ್ ಸ್ಟೀರಿಯೋದ ರೆಪ್ಲಿಕಾ ಆಗಿದೆ ಎಂದು ಕಲಾವಿದ ಹೇಳಿದ್ದಾರೆ. ಈ ಕಲಾಕೃತಿಯನ್ನ ನಿರ್ಮಾಣ ಮಾಡಿ ರೇಡಿಯೋಗೆ ಗೌರವ ಸಲ್ಲಿಸೋದ್ರ ಜೊತೆಗೆ ಆಕಾಶವಾಣಿಯ ಕಾರ್ಯಕ್ರಮಗಳನ್ನ ಕೇಳೋದನ್ನ ನಿಲ್ಲಿಸದಿರಿ ಎಂದು ಜನರಲ್ಲಿ ಮನವಿ ಮಾಡಿದ್ದೇನೆ. ನಾಲ್ಕು ದಿನಗಳನ್ನ ತೆಗೆದುಕೊಂಡು 3130 ಬೆಂಕಿ ಕಡ್ಡಿಯನ್ನ ಬಳಸಿ ಈ ಕಲಾಕೃತಿ ನಿರ್ಮಿಸಿದ್ದೇನೆ ಎಂದು ಸಾಸ್ವತ್ ಹೇಳಿದ್ದಾರೆ. Odisha: To mark World Radio Day on February 13, an artist in Puri has made a replica of radio by using matchsticks. "I used 3,130 matchsticks and worked for four days to make this replica," Saswat Ranjan Sahoo said yesterday. pic.twitter.com/bREzfn3xae — ANI (@ANI) February 13, 2021