ನವದೆಹಲಿ: ಡಿಯರೆನ್ಸ್ ಅಲೋವೆನ್ಸ್ ಹೆಚ್ಚಳ ವಿಳಂಬವಾದ ಬಗ್ಗೆ ಬೇಸರಗೊಂಡಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ತಮ್ಮ ಮರಣಾ ನಂತರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಭದ್ರತೆ ಸಿಗಲಿದೆ ಎಂಬ ವಿಶ್ವಾಸವನ್ನು ಮೂಡಿಸಿದೆ.
ಮಾಸಿಕ ಕೌಟುಂಬಿಕ ನಿವೃತ್ತಿ ವೇತನವನ್ನು 45 ಸಾವಿರ ರೂ.ನಿಂದ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ನಿವೃತ್ತಿ ವೇತನ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಚಿವ ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ATM ನಲ್ಲಿ ನಕಲಿ ನೋಟು ಬಂದ ವೇಳೆ ಮಾಡಬೇಕಾದ್ದೇನು….? ಇಲ್ಲಿದೆ ಸಂಪೂರ್ಣ ವಿವರ
ಕೇಂದ್ರ ಸರ್ಕಾರಿ ನೌಕರರಾಗಿರುವ ಪಾಲಕರಾದ ಅಪ್ಪ-ಅಮ್ಮ ಇಬ್ಬರೂ ಸಾವನ್ನಪ್ಪಿದರೆ ಮಗುವು ಎರಡು ನಿವೃತ್ತಿ ವೇತನಾನುದಾನ ಪಡೆಯಲು ಅರ್ಹವಾಗಿರುತ್ತದೆ. ಆದರೆ, ಅದು 1.25 ಲಕ್ಷ ರೂಪಾಯಿ ಮೀರಿರಬಾರದೆಂಬ ನಿಯಮವನ್ನು ವಿಧಿಸಲಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. 7 ನೇ ವೇತನ ಆಯೋಗದ ಶಿಫಾರಸಿನಲ್ಲಿ ಸಿಪಿಸಿ 2.50 ಲಕ್ಷ ರೂಪಾಯಿಯ ಶೇ.50ರಷ್ಟು ಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ.