
ಹಿಮಾಲಯನ್ ಬೈಕ್‌ನ ಹೊಸ ವರ್ಶನ್ ಅನ್ನು ಭಾರತ, ಯೂರೋಪ್ ಹಾಗೂ ಬ್ರಿಟನ್‌ನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ ರಾಯಲ್ ಎನ್‌ಫೀಲ್ಡ್.
ಸಾಹಸ ಹಾಗೂ ಟೂರಿಂಗ್‌ಗೆ ಹೇಳಿ ಮಾಡಿಸಿರುವ ಈ ಮೋಟರ್ ಸೈಕಲ್ ಮೂರು ಬಣ್ಣಗಳಲ್ಲಿ — ಕಪ್ಪು, ಹಸಿರು ಮತ್ತು ಬೆಳ್ಳಿ — ಲಭ್ಯವಿದೆ. ಫೆಬ್ರವರಿ 11ರಿಂದ ರಾಯಲ್ ಎನ್‌ಫೀಲ್ಡ್ ಶೋರೂಂಗಳಲ್ಲಿ ಈ ಬೈಕ್ ಅನ್ನು ಬುಕ್ ಮಾಡಿಕೊಳ್ಳಬಹುದು ಹಾಗೂ ಟೆಸ್ಟ್ ರೈಡ್ ಸಹ ಮಾಡಬಹುದಾಗಿದೆ.
ಹೊಸ ರೂಪದಲ್ಲಿ ತಲೆ ಎತ್ತಲಿದೆ ಕಂಠೀರವ ಕ್ರೀಡಾಂಗಣ: ಹೈಟೆಕ್ ಸ್ಟೇಡಿಯಂನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ….?
ಈ ಬೈಕ್‌ನ ಬೆಲೆ 2.01 ಲಕ್ಷ ರೂಗಳಷ್ಟಿದ್ದು (ಎಕ್ಸ್‌ಶೋರೂಂ) ರಾಯಲ್ ಎನ್‌ಫೀಲ್ಡ್ ಟ್ರಿಪ್ಪರ್ ನೇವಿಗೇಷನ್ ವ್ಯವಸ್ಥೆಯೊಂದಿಗೆ ಸೀಟ್, ಹಿಂಬದಿ ಕ್ಯಾರಿಯರ್, ಮುಂದಿನ ರ‍್ಯಾಕ್, ಹೊಸ ವಿಂಡ್ ಸ್ಕ್ರೀನ್ ಸೇರಿದಂತೆ ಅನೇಕ ಹೊಸ ಮಾರ್ಪಾಡುಗಳನ್ನು ಮಾಡಲಾಗಿದೆ.