ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಯಾವೋ ಚೇ ಹಾಗೂ ಆತನ ಪೋಷಕರು, ಕೋರ್ಟ್ ಒಂದರ ಆದೇಶದಂತೆ ಆಸ್ಪತ್ರೆಯೊಂದರಿಂದ ಒಂದು ದಶಲಕ್ಷ ಯುವಾನ್ ಅನ್ನು ದಂಡದ ರೂಪದಲ್ಲಿ ಸ್ವೀಕರಿಸಲಿದ್ದಾರೆ.
28 ವರ್ಷಗಳ ಹಿಂದೆ ತಾನು ಹುಟ್ಟಿದ ದಿನವೇ ಆತನ ಹೆತ್ತವರು ಗೊತ್ತಿಲ್ಲದಂತೆ ಮತ್ತೊಂದು ಮಗುವನ್ನು ತಮ್ಮದು ಎಂದುಕೊಂಡ ಕಾರಣ ತನ್ನ ಹೆತ್ತವರಿಂದ ದೂರವಾದ ಯಾವೋ, ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಕೈಫೆಂಗ್ ಇಂಟರ್ಮೀಡಿಯೇಟ್ ಪೀಪಲ್ಸ್ ಕೋರ್ಟ್ನಲ್ಲಿ ತಾನು ಸಲ್ಲಿಸಿದ್ದ ಅಪೀಲ್ನಲ್ಲಿ ಗೆದ್ದ ಯಾವೋ, ಈಗ ಭಾರೀ ಪರಿಹಾರ ಧನ ಪಡೆಯುತ್ತಿದ್ದಾರೆ.
ಜೂನ್ 2020ರಲ್ಲಿ ತಾನು ಹುಟ್ಟಿದ ದಿನ ಹೀಗೆ ಆಗಿದೆ ಎಂದು ಅರಿತ ಯಾವೋಗೆ, ಈ ವಿಚಾರ ಫೆಬ್ರವರಿ 2020ರಲ್ಲಿ ಸುಳಿವು ಸಿಕ್ಕಿದೆ. ಕ್ಯಾನ್ಸರ್ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಯಾವೋಗೆ ಆತನ ಸಾಕಿದ ತಾಯಿ ಲಿವರ್ ಕೊಡಲು ಮುಂದಾಗಿದ್ದರು. ಈ ವೇಳೆ ತನ್ನನ್ನು ಸಾಕುತ್ತಿರುವ ಇಬ್ಬರೂ ಪೋಷಕರ ರಕ್ತವು ಯಾವೋಗೆ ಮ್ಯಾಚ್ ಆಗುತ್ತಿಲ್ಲ ಎಂಬುದು ತಿಳಿದು ಬಂದಿತ್ತು.
ವಿವಾಹವಾದ ಕೆಲವೇ ದಿನಗಳಲ್ಲಿ ಪತ್ನಿ ಅತ್ಯಾಚಾರದ ವಿಡಿಯೋ ವೈರಲ್…! ಇದನ್ನು ನೋಡಿ ಪತ್ನಿಯನ್ನು ತ್ಯಜಿಸಿದ ಪತಿ
ಹೀಗಾಗಿ, ಯಾವೋ ಹುಟ್ಟಿದ ಆಸ್ಪತ್ರೆಗೆ ತೆರಳಿ ಏನಾಗಿದೆ ಎಂದು ತನಿಖೆ ನಡೆಸಲು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಯಾವೋ ಪೋಷಕರು ಮುಂದಾಗಿದ್ದಾರೆ. ತಮ್ಮ ದೈಹಿಕ ಮಗು ಯಾವೋ ಅಲ್ಲ ಎಂದು ಅರಿತ ಆತನ ಪೋಷಕರು, ಗುವೋ ವೇಯ್ ಹೆಸರಿನ ತಮ್ಮ ಜೈವಿಕ ಮಗುವು ಯಾವೋನ ಹೆತ್ತವರೊಂದಿಗೆ ಇರುವ ವಿಷಯ ಅರಿತುಕೊಂಡಿದ್ದಾರೆ.
ಯಾವೋಗೆ ಜನ್ಮ ಕೊಟ್ಟ ತಾಯಿ ಸಹ ಲಿವರ್ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು ಎಂಬುದು ತಿಳಿದು ಬಂದಿದ್ದು, ಇದೇ ಪರಿಸ್ಥಿತಿಯನ್ನು ಯಾವೋ ಈಗ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯ ಸಿಬ್ಬಂದಿಯ ಕರ್ತವ್ಯ ಲೋಪದ ಕಾರಣ ಸುದೀರ್ಘಾವಧಿಗೆ ಮಾನಸಿಕ ಯಾತನೆ ಹಾಗೂ ಆರ್ಥಿಕ ವೆಚ್ಚ ಅನುಭವಿಸಿದ ಯಾವೋ ಹಾಗೂ ಆತನ ಸಾಕು ತಂದೆ – ತಾಯಿಗೆ ಕ್ರಮವಾಗಿ 800000 ಯುವಾನ್ ಹಾಗೂ 200000 ಯುವಾನ್ಗಳನ್ನು ಪರಿಹಾರದ ರೂಪದಲ್ಲಿ ಕೊಡುವಂತೆ ಆಸ್ಪತ್ರೆಗೆ ಕೋರ್ಟ್ ಆದೇಶ ನೀಡಿದೆ.