ಸಾಮಾನ್ಯವಾಗಿ ತಮ್ಮ ಡೇಟಿಂಗ್ ಅಫೇರ್‌ಗಳನ್ನು ಜನರು ತಮ್ಮ ಹೆತ್ತವರ ಗಮನಕ್ಕೆ ಬಾರದಂತೆ ನೋಡಿಕೊಳ್ಳುವುದು ಜಗತ್ತಿನಲ್ಲಿ ಎಲ್ಲ ಕಡೆ ಸಹಜವಾಗಿರುವ ವಿಚಾರ.
ಆದರೆ ಇದೇ ವಿಷಯದಲ್ಲಿ ಬಹಳ ಓಪನ್ ಮೈಂಡೆಡ್ ಆಗಿರುವ ಮೂಲಕ ತಮ್ಮ ಮಕ್ಕಳ ಪ್ರಣಯ ಸಲ್ಲಾಪಕ್ಕೆ ಬೆಂಬಲ ಕೊಡುವ ಕೂಲ್ ಮಾಮ್ & ಕೂಲ್ ಡ್ಯಾಡ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಲೇ ಇರುತ್ತಾರೆ. ಇನ್ನೂ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಮಕ್ಕಳಿಗೆ ಸಂಗಾತಿಯನ್ನ ಹುಡುಕಿಕೊಳ್ಳಲೂ ಪ್ರೇರಣೆ ಕೊಡುತ್ತಾರೆ.
ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮಗುವನ್ನೇ ಕೊಂದ ಸಹೋದರಿ…!
ತನ್ನೊಂದಿಗೆ ಚಾಟ್ ಮಾಡಲು ಬಾ ಎಂದು ಕರೆದ ಮಗಳಿಗೆ, ’ಇಂಥದಕ್ಕೆಲ್ಲಾ ಮೊದಲು ಒಬ್ಬ ಬಾಯ್ ಫ್ರೆಂಡ್ ಅನ್ನು ನೋಡಿಕೋ’ ಎಂದು ಖುದ್ದು ತಾಯಿಯೇ ಪ್ರೇರೇಪಣೆ ಕೊಡುತ್ತಿರುವ ಸಂದೇಶದ ಸ್ಕ್ರೀನ್ ಶಾಟ್ ಒಂದು ಸದ್ದು ಮಾಡುತ್ತಿದೆ. ತನಗೆ ಮಾಡಲು ಸಿಕ್ಕಾಪಟ್ಟೆ ಕೆಲಸವಿದ್ದು, ಔಟಿಂಗ್ ಹೋಗುವುದಕ್ಕೆಲ್ಲಾ ಜೊತೆಗೆ ಯಾರಾದರೂ ಬೇಕಾದರೆ ಬಾಯ್‌ಫ್ರೆಂಡ್ ಅನ್ನು ಹುಡುಕಿಕೋ ಎಂದು ತಾಯಿಯೇ ಬೆಂಬಲ ಕೊಡುತ್ತಿರುವುದನ್ನು ಇಲ್ಲಿ ನೋಡಬಹುದಾಗಿದೆ.
https://twitter.com/LagGayeHai/status/1358155771196932099?ref_src=twsrc%5Etfw%7Ctwcamp%5Etweetembed%7Ctwterm%5E1358155771196932099%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fsuch-a-cool-mom-woman-roasts-daughter-over-not-having-a-boyfriend-desi-twitter-is-impressed-3413984.html