ಕೋವಿಡ್ ಸಾಂಕ್ರಮಿಕ ಕಾರಣದಿಂದ ಎಲ್ಲೆಲ್ಲೂ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ.
ದುಬಾಯ್‌ನ ರೋಬೋಕೆಫೆ ತನ್ನಲ್ಲಿಗೆ ಬರುವ ಗ್ರಾಹಕರ ನಡುವೆ ಸಾಮಾಜಿಕ ಅಂತರ ಖಾತ್ರಿ ಪಡಿಸಲು ಜರ್ಮನ್ ನಿರ್ಮಿತ ರೋಬೊಟ್‌ಗಳನ್ನು ತರಿಸಿದ್ದು, ಇವುಗಳು ಆಹಾರವನ್ನು ಗ್ರಾಹಕರ ಟೇಬಲ್‌ಗಳಿಗೆ ರವಾನೆ ಮಾಡಲಿವೆ.
ರಾಜ್ಯದಲ್ಲಿಂದು 415 ಜನರಿಗೆ ಕೊರೋನಾ ಸೋಂಕು, 3 ಮಂದಿ ಸಾವು
“ಇದು ಒಳ್ಳೆಯ ಐಡಿಯಾ, ಅದರಲ್ಲೂ ಇಂಥ ಪರಿಸ್ಥಿತಿಯಲ್ಲಿ. ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಜನರು ಬರುತ್ತಿಲ್ಲ, ಹಾಗಾಗಿ ಈ ಐಡಿಯಾ ಜನಪ್ರಿಯವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇನೆ. ನೀವು ಆನ್ಲೈನ್‌ನಲ್ಲಿ ಆರ್ಡರ್ ಮಾಡಿದಲ್ಲಿ ರೋಬೊಟ್‌ಗಳು ನಿಮ್ಮ ಮುಂದೆಯೇ ಕೆಲಸ ಮಾಡಲಿದ್ದು, ನಿಮಗೆ ಬೇಕಾದ ತಿನಿಸನ್ನು ನಿಮಿಷಗಳಲ್ಲಿ ತಂದು ಇಡಲಿದೆ” ಎಂದು ರೆಸ್ಟೋರೆಂಟ್‌ನ ಗ್ರಾಹಕ ಜಮಾಲ್ ಅಲಿ ಹಸನ್ ತಿಳಿಸಿದ್ದಾರೆ.