alex Certify ಮಾರಾಟಕ್ಕಿದೆ ನ್ಯೂಯಾರ್ಕ್ ‌‌ನ ಈ 3ಡಿ ಪ್ರಿಂಟೆಡ್ ಮನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಾಟಕ್ಕಿದೆ ನ್ಯೂಯಾರ್ಕ್ ‌‌ನ ಈ 3ಡಿ ಪ್ರಿಂಟೆಡ್ ಮನೆ…!

Image result for Future of Construction? 3D Printed House up for Sale in New York for $299K

3ಡಿ ತಂತ್ರಜ್ಞಾನ ಬಳಸಿಕೊಂಡು ಮುಖದ ಮಾಸ್ಕ್‌ಗಳು, ಬ್ರೇಸ್‌ಗಳು, ಪ್ರೋಸ್ಥೆಟಿಕ್ಸ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ನಿರ್ಮಿಸಲಾಗಿದ್ದು, ಅವುಗಳು ಬಹಳ ಟ್ರೆಂಡಿಂಗ್ ಆಗುತ್ತಿವೆ. ಈ ತಂತ್ರಜ್ಞಾನ ಅದೆಷ್ಟು ಜನಪ್ರಿಯವಾಗಿದೆ ಎಂದರೆ ಮೆಕ್ಸಿಕೋ, ಆಮ್‌ಸ್ಟರ್‌ಡ್ಯಾಮ್, ಇಟಲಿ ಹಾಗೂ ಅಮೆರಿಕದಲ್ಲಿ 3ಡಿ ಪ್ರಿಂಟೆಡ್ ಮನೆಗಳನ್ನು ನೋಡಬಹುದಾಗಿದೆ.

ಇದೀಗ ನ್ಯೂಯಾರ್ಕ್‌ನಲ್ಲಿರುವ ಕ್ಲೆವರ್ಟನ್‌ ಪ್ರದೇಶದಲ್ಲಿರುವ 3ಡಿ ಪ್ರಿಂಟೆಡ್‌ ಮನೆಯೊಂದನ್ನು ಮಾರಾಟಕ್ಕೆ ಇಡಲಾಗಿದೆ. ಎಸ್‌ಕ್ಯೂಡಿ ಹೆಸರಿನ ಕಂಪನಿಯೊಂದು ಈ ಮನೆಯನ್ನು ಕಳೆದ ವರ್ಷ ನಿರ್ಮಾಣ ಮಾಡಿದೆ. ಇದು ಜಗತ್ತಿನ ಅತಿ ದೊಡ್ಡ 3ಡಿ ಪ್ರಿಂಟೆಡ್ ಮನೆಯಾಗಿದೆ. 1900 ಚದರ ಅಡಿ ವಿಸ್ತೀರ್ಣದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಎಂಟು ದಿನಗಳ ಕಾಲ ವಿನ್ಯಾಸ ಮಾಡಲಾದ ಈ ಮನೆಯ ನಿರ್ಮಾಣ ಮಾಡಲು ಕಂಪನಿಗೆ 48 ಗಂಟೆಗಳ ಕಾಲಾವಧಿ ತಗುಲಿದೆ. $300 ಸಾವಿರಗಳ ಬೆಲೆಗೆ ಈ ಮನೆಯನ್ನು ಮಾರಾಟಕ್ಕೆ ಇಡಲಾಗಿದೆ.

ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್

ಈ ವಿಧಾನದಲ್ಲಿ ಮನೆ ನಿರ್ಮಾಣ ಮಾಡಿದಲ್ಲಿ, ನಿರ್ಮಾಣ ವೆಚ್ಚವು ಅರ್ಧದಷ್ಟು ತಗ್ಗಲಿದೆ. ಯಂತ್ರದ ಮೂಲಕ ಈ ಮನೆ ನಿರ್ಮಿಸಲಾಗಿದ್ದು, ಕೇವಲ ಇಬ್ಬರು ಮಂದಿ ನಿರ್ಮಾಣ ಸ್ಥಳದಲ್ಲಿ ಉಸ್ತುವಾರಿ ನೋಡಿಕೊಳ್ಳಲು ಹಾಜರಿದ್ದರು. ಗೋಡೆಗಳನ್ನು ನಿರ್ಮಿಸಲು ಸಿಮೆಂಟ್ ‌ಅನ್ನು ಈ ಯಂತ್ರ ಹೊರಸೂಸಿದ್ದು, 50ಕ್ಕೂ ಹೆಚ್ಚು ವರ್ಷಗಳ ಕಾಲ ಈ ಮನೆ ಬಾಳಿಕೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...