ಟೀಂ ಇಂಡಿಯಾ ಕ್ರಿಕೆಟ್ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಹತ್ವದ ಮೈಲುಗಲ್ಲೊಂದನ್ನು ದಾಟಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತ ಮೂರನೇ ವೇಗದ ಬೌಲರ್ ಎಂಬ ಶ್ರೇಯಕ್ಕೆ ಶರ್ಮಾ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಈ ಸಾಧನೆಗೈದ ಆರನೇ ಭಾರತೀಯ ಇಶಾಂತ್. ತನ್ಮೂಲಕ ಕಪಿಲ್ ದೇವ್, ಅನಿಲ್ ಕುಂಬ್ಳೆರಂಥ ಸಾರ್ವಕಾಲಿಕ ಶ್ರೇಷ್ಠರ ಸಾಲು ಸೇರಿದ್ದಾರೆ ಆರೂವರೆ ಅಡಿ ಉದ್ದದ ವೇಗಿ.
ಪಾಕ್ ನಲ್ಲಿರುವ ರಾಜ್ ಕಪೂರ್ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….!
ಪಂದ್ಯದ ನಾಲ್ಕನೇ ದಿನದಂದು, ಇಂಗ್ಲೆಂಡ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಡ್ಯಾನ್ ಲಾರೆನ್ಸ್‌ರನ್ನು ಎಲ್‌ಬಿ ಬಲೆಗೆ ಕೆಡವಿದ ಇಶಾಂತ್ ತಮ್ಮ 98ನೇ ಟೆಸ್ಟ್ ಪಂದ್ಯದಲ್ಲಿ 300ನೇ ವಿಕೆಟ್ ಬುಟ್ಟಿಗೆ ಬೀಳಿಸಿಕೊಂಡಿದ್ದಾರೆ.
ಈ ಮುನ್ನ ಕಪಿಲ್ ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಹೀರ್ ಖಾನ್ ಹಾಗೂ ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.