ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯ ಡ್ರೈವಿಂಗ್ ಸೆಂಟರ್ಗಳಿಗೆ ಎಕ್ರಿಡಿಯೇಷನ್ಗಾಗಿ ಡ್ರಾಫ್ಟ್ ನೋಟಿಫಿಕೇಷನ್ನ್ನು ಜಾರಿ ಮಾಡಿದೆ. ಇಂತಹ ಸೆಂಟರ್ಗಳಿಗೆ ಡ್ರೈವಿಂಗ್ ತರಬೇತಿಯನ್ನ ಸಂಪೂರ್ಣವಾಗಿ ಪಡೆದ ವ್ಯಕ್ತಿಯು ವಾಹನ ಪರವಾನಿಗೆಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಡ್ರೈವಿಂಗ್ ಟೆಸ್ಟ್ ನೀಡಬೇಕು ಎಂಬ ಅವಶ್ಯಕತೆ ಇರೋದಿಲ್ಲ.
ಈ ವಿಚಾರವಾಗಿ ಮಾಹಿತಿ ನೀಡಿದ ಕೇಂದ್ರ ಸಚಿವಾಲಯ, ಈ ಮಹತ್ವದ ಹೆಜ್ಜೆಯಿಂದಾಗಿ ಸಾರಿಗೆ ಲೋಕಕ್ಕೆ ಒಳ್ಳೆಯ ಚಾಲಕ ಸಿಕ್ಕಂತೆ ಆಗುತ್ತೆ. ಮಾತ್ರವಲ್ಲದೇ ರಸ್ತೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ. ಜನವರಿ 29ರಂದು ಕೇಂದ್ರ ಸಚಿವಾಲಯದ ಅಧಿಕೃತ ವೆಬ್ಸೈಟ್ ಖಾತೆಯಲ್ಲಿ ಈ ಡ್ರಾಫ್ಟ್ ನೋಟಿಫಿಕೇಶನ್ ಹಾಕಲಾಗಿದ್ದು ಜನರಿಂದ ಸಲಹೆಯನ್ನ ಕೇಳಲಾಗಿದೆ. ಎಲ್ಲರ ಸಲಹೆಗಳನ್ನ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸಚಿವಾಲಯ ಮುಂದಿನ ನಿರ್ಧಾರವನ್ನ ಕೈಗೊಳ್ಳಲಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಕಳೆದ ವರ್ಷ ಟ್ರಾನ್ಸ್ಪೋರ್ಟ್ ಡೆವಲಪ್ಮೆಂಟ್ ಕೌನ್ಸಿಲ್ನ 40ನೇ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ವೇಳೆ 2025ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನ ಅರ್ಧದಷ್ಟು ಕಡಿಮೆ ಮಾಡಲು ಬೇಕಾದ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಹೇಳಿದ್ದನ್ನ ನಾವಿಲ್ಲಿ ನೆನಪಿಸಬಹುದು.
ರಾಷ್ಟ್ರೀಯ ರಸ್ತೆ ಸುರಕ್ಷತೆ ಕೌನ್ಸಿಲ್ನ 19ನೇ ಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಸ್ತೆ ಸುರಕ್ಷತೆಗಾಗಿ ಸಾಮಾಜಿಕ ಜಾಲತಾಣವನ್ನ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದರು. ಇದರಿಂದ ರಸ್ತೆ ಅವಘಡಗಳನ್ನ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದರು.