ಬರಿಗಾಲಿನಲ್ಲಿ ಮಂಜುಗಡ್ಡೆಯ ರಾಶಿಯ ಮೇಲೆ ನಡೆದಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಈ ಸಾಧನೆಯನ್ನ ಮಾಡಬೇಕು ಅಂದರೆ ಹಲವಾರು ಸಮಯದ ತರಬೇತಿಯಂತೂ ಬೇಕೆ ಬೇಕು.
ಆದರೆ ಜೋಸಾನ್ ಫೆಲ್ಡೆ ಎಂಬಾತ 1 ಗಂಟೆ 44 ನಿಮಿಷ 58 ಸೆಕೆಂಡ್ಗಳ ಕಾಲ ಮಂಜಿನ ರಾಶಿ ಮೇಲೆ ಬರಿಗಾಲಲ್ಲಿ ಓಡಿ ಹಾಫ್ ಮ್ಯಾರಥಾನ್ ಗುರಿ ಮುಟ್ಟುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ಈ ವ್ಯಕ್ತಿಯ ಈ ಗಿನ್ನೆಸ್ ದಾಖಲೆಯ ಸಾಧನೆಯ ವಿಡಿಯೋವನ್ನ ಯುಟ್ಯೂಬ್ನಲ್ಲಿ ಶೇರ್ ಮಾಡಲಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಾನು ವಿಮ್ ಹಾಫ್ರ ಗಿನ್ನೆಸ್ ದಾಖಲೆಯನ್ನ ಮುರಿಯಲು ಯತ್ನಿಸಿದೆ. ಇದು ನನ್ನ ಜೀವನದಲ್ಲೇ ನಾನು ಎದುರಿಸಿದ ಕಠಿಣ ಸವಾಲು ಎಂದು ಯುಟ್ಯೂಬ್ನಲ್ಲಿ ಜೋಸಾನ್ ಶೀರ್ಷಿಕೆ ನೀಡಿದ್ದಾರೆ. 2007ರಲ್ಲಿ ವಿಮ್ ಹಾಫ್ 2 ಗಂಟೆ 16 ನಿಮಿಷ 34 ಸೆಕೆಂಡ್ ಅವಧಿಯಲ್ಲಿ ಹಾಫ್ ಮ್ಯಾರಥಾನ್ ಕ್ರಮಿಸಿದ್ದರು.