ಚಮೋಲಿ: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮಸ್ಫೋಟ ವಿಶ್ವವನ್ನು ಕಂಗೆಡಿಸಿದೆ. ಪ್ರವಾಹದ ರಾಡಿ ಹಲವು ಪ್ರದೇಶಗಳನ್ನು ಮುಚ್ಚಿ ಹಾಕಿದೆ. ಮಣ್ಣಿನಡಿ ಹಲವರು ಸಿಲುಕಿಕೊಂಡಿದ್ದಾರೆ.
ಪ್ರವಾಹದ ರಾಡಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬನನ್ನು ಇಂಡೊ-ಟಿಬೇಟ್ ಬಾರ್ಡರ್ ಫೋರ್ಸ್(ಐಟಿಬಿಪಿ)ಸೈನಿಕರು ರಕ್ಷಿಸಿದ ಹೃದಯಸ್ಪರ್ಶಿ ವಿಡಿಯೋ ಕೆಲವೇ ಕ್ಷಣದಲ್ಲಿ ಟ್ವಿಟ್ಟರ್ ನಲ್ಲಿ
ವೈರಲ್ ಆಗಿದೆ. ಸುದ್ದಿ ಸಂಸ್ಥೆ ಎಎನ್ಐ ಅದನ್ನು ಟ್ವೀಟ್ ಮಾಡಿದ್ದು, 16 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ನೋಡಿದ ಜನ ‘ಜೈ ಹಿಂದ್’ ಎಂದು, ‘ಬಿಗ್ ಸೆಲ್ಯೂಟ್ ಟು ಐಟಿಬಿಪಿ’ ಎಂದು ಕಮೆಂಟಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ಬೈಕ್ ಸವಾರಿ ವಿಡಿಯೋ
ಮಣ್ಣಿನಡಿ ಸಿಲುಕಿದ ವ್ಯಕ್ತಿಯನ್ನು ಸೈನಿಕರು “ಜೋರ್ ಲಗಾಕೆ ಐಸಾ” ಎಂದು ಕೂಗುತ್ತ ಎಳೆಯುತ್ತಾರೆ. ಆತನನ್ನು ರಕ್ಷಿಸಿದ ಬಳಿಕ ಖುಷಿಯಲ್ಲಿ ಕೈ ಎತ್ತಿ ಹರ್ಷೋದ್ಘಾರ ವ್ಯಕ್ತಪಡಿಸುತ್ತಾರೆ. ಬದುಕಿ ಬಂದ ವ್ಯಕ್ತಿಯೂ ವಿಕ್ಟರಿ ಚಿಹ್ನೆ ತೋರಿಸುತ್ತ ಇದು ನನ್ನ ಮರು ಹುಟ್ಟು ಎಂದು ಪ್ರತಿಕ್ರಿಯಿಸಿದ್ದಾನೆ. ಇದುವರೆಗೆ 10ಕ್ಕೂ ಅಧಿಕ ಜನರನ್ನು ಹುಡುಕಿ ರಕ್ಷಿಸಲಾಗಿದೆ.