ಸಾಮಾನ್ಯವಾಗಿ ಪರ್ಸ್ ನಲ್ಲಿ ಹಣ ಮಾತ್ರ ಇರೋದಿಲ್ಲ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆಧಾರ್, ಪಾನ್ ಹೀಗೆ ಅನೇಕ ಮುಖ್ಯ ದಾಖಲೆಗಳನ್ನು ಇಟ್ಟುಕೊಂಡಿರ್ತೇವೆ. ಪರ್ಸ್ ಕಳ್ಳತನವಾದ್ರೆ ಏನು ಮಾಡೋದು ಎಂಬ ಗೊಂದಲ ಎದುರಾಗುತ್ತೆ. ಪರ್ಸ್ ಕಳ್ಳತನವಾದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಅನೇಕ ಕಂಪನಿಗಳು ಪರ್ಸ್ ಕಳ್ಳತನವಾದ್ರೆ ಎಲ್ಲ ದಾಖಲೆಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತದೆ. ಇದಕ್ಕೆ ಹಣ ಪಾವತಿ ಮಾಡುವ ಅಗತ್ಯವಿಲ್ಲ.
ಒನ್ ಅಸಿಸ್ಟ್ ಹೆಸರಿನ ಕಂಪನಿ, ನಿಮ್ಮ ಪರ್ಸ್ ಕಳ್ಳತನವಾದ್ರೆ ನಿಮಗೆ ಸಹಾಯ ಮಾಡುತ್ತೆ. ಕಂಪನಿ ಪಾಲಿಸಿ ಸೌಲಭ್ಯ ನೀಡುತ್ತದೆ. ವಾರ್ಷಿಕವಾಗಿ 1599 ರೂಪಾಯಿ ಪಾವತಿ ಮಾಡಬೇಕು. ಈ ಪಾಲಿಸಿ ತೆಗೆದುಕೊಂಡ್ಮೇಲೆ ಪರ್ಸ್ ಕಳ್ಳತನವಾದ್ರೆ ಚಿಂತಿಸಬೇಕಾಗಿಲ್ಲ. ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಂದಿರುವ ಬ್ಯಾಂಕ್ ಗೆ ಕರೆ ಮಾಡಿ ನಿಮ್ಮ ಕಾರ್ಡ್ ಬ್ಲಾಕ್ ಮಾಡಿಸಬೇಕಾಗಿಲ್ಲ. ಕಂಪನಿಗೆ ಕರೆ ಮಾಡಿ ಫೋನ್ ಮಾಡಿದ್ರೆ ಸಾಕು ಎಲ್ಲ ಕಾರ್ಡ್ ಬ್ಲಾಕ್ ಆಗುತ್ತದೆ.
ಬ್ರಿಟನ್ನಲ್ಲಿ ಪಬ್ ಓಪನ್ ಆದರೂ ಸಿಗೋದಿಲ್ಲ ಆಲ್ಕೋಹಾಲ್…!
ಇಷ್ಟೇ ಅಲ್ಲ ಬೇರೆ ಊರಿನಲ್ಲಿದ್ದು, ಹಣವಿಲ್ಲವೆಂದ್ರೆ ಕಂಪನಿ 50 ಸಾವಿರ ರೂಪಾಯಿ ನೀಡುತ್ತದೆ. ಜೊತೆಗೆ ಟ್ರೈನ್, ವಿಮಾನ ಟಿಕೆಟ್ ಬುಕ್ ಮಾಡಲು ನೆರವಾಗುತ್ತದೆ. ಹೆಚ್ಚುವರಿ ಶುಲ್ಕವಿಲ್ಲದೆ ಎಲ್ಲ ಸೌಲಭ್ಯ ನೀಡುತ್ತದೆ. ಪರ್ಸ್ ಕಳ್ಳತನವಾದ ದೂರಿನ ಪ್ರತಿಯನ್ನು ಕಂಪನಿಗೆ ನೀಡಿದ್ರೆ ಎಲ್ಲ ಕಾರ್ಡ್ ಗಳು ಮತ್ತೆ ಮುದ್ರಣಗೊಂಡು ನಿಮ್ಮ ಮನೆ ವಿಳಾಸಕ್ಕೆ ಬರುತ್ತದೆ.