ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ಬ್ಯಾಂಕ್ಗೆ ಅಲೆಯಬೇಕು ಅನ್ನೋ ಕಷ್ಟ ದೂರಾಗಿದೆ. ಮೊದಲೆಲ್ಲಾ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೇ ಕಾದು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್ಗೆ ಹಣ ವರ್ಗಾವಣೆ ಮಾಡಲಾಗ್ತಿತ್ತು.
ಆದರೆ ನೆಟ್ ಬ್ಯಾಂಕಿಂಗ್ನಿಂದಾಗಿ ಕೆಲವೇ ಸೆಕೆಂಡ್ಗಳಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ. ಪ್ರತಿ ಬ್ಯಾಂಕ್ಗೂ ಅದರದ್ದೇ ಅಪ್ಲಿಕೇಶನ್ ಇದ್ದು ಈ ಮೂಲಕ ಎಲ್ಲಾ ವ್ಯವಹಾರವನ್ನ ನಡೆಸಬಹುದಾಗಿದೆ.
ಆದರೆ ನೀವು ಆನ್ಲೈನ್ ಬ್ಯಾಂಕಿಂಗ್ ಮೂಲಕ ಬೇರೆ ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆ ಮಾಡುವ ವೇಳೆ ಐಎಫ್ಎಸ್ಸಿ ಕೋಡ್ನ್ನು ತಪ್ಪಾಗಿ ನಮೂದಿಸಿದಲ್ಲಿ ಏನಾಗಬಹುದು..? ನಿಮ್ಮ ಹಣ ಬೇರೆ ಯಾರದ್ದೋ ಖಾತೆಗೆ ಹೋಗಿ ಬಿಡಬಹುದಾ..? ಇಂತಹ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಮೂಡಿರಬಹುದು.
ಆನ್ಲೈನ್ ವ್ಯವಹಾರದ ವೇಳೆ ಐಎಫ್ಎಸ್ಸಿ ಕೋಡ್ ನಮೂದಿಸುವ ಮುನ್ನ ನೀವು ಕೊಂಚ ಎಚ್ಚರಿಕೆಯಿಂದ ಇರೋದು ಒಳಿತು. ನೀವು ಖಾತೆದಾರರ ಹೆಸರು ಹಾಗೂ ಖಾತೆಯ ಸಂಖ್ಯೆಯನ್ನ ಸರಿಯಾಗಿ ನಮೂದಿಸಿದಲ್ಲಿ ಐಎಫ್ಎಸ್ಸಿ ಸಂಖ್ಯೆ ತಪ್ಪಾದರೂ ನಿಮ್ಮ ಹಣ 99 ಪ್ರತಿಶತ ಸೇರಬೇಕಾದವರ ಖಾತೆಗೆ ಹೋಗಿ ಸೇರಲಿದೆ.
ಆದರೆ ಐಎಫ್ಎಸ್ಸಿ ಸಂಖ್ಯೆ ಕೂಡ ವ್ಯವಹಾರದ ಭಾಗವಾಗಿರೋದ್ರಿಂದ ಮುಂದಿನ ಬಾರಿ ವ್ಯವಹಾರ ಮಾಡುವ ವೇಳೆ ಐಎಫ್ಎಸ್ಸಿ ಕೋಡ್ನ್ನು ಮರುಪರಿಶೀಲನೆ ಮಾಡಲು ಮರೆಯದಿರಿ.