ಕೊರೊನಾ ವೈರಸ್ ಬಂದ್ಮೇಲೆ ಬಾಲಿವುಡ್ ನಷ್ಟದಲ್ಲಿದೆ. ಆದ್ರೆ ಕೆಲ ನಟರ ಬ್ರಾಂಡ್ ಮೌಲ್ಯ ಮಾತ್ರ ಕಡಿಮೆಯಾಗಿಲ್ಲ. ಬಾಲಿವುಡ್ ನಟ ರಣವೀರ್ ಸಿಂಗ್ ಬ್ರಾಂಡ್ ಮೌಲ್ಯ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಕೊರೊನಾ ರಣವೀರ್ ಕೆಲಸದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಮೂಲಗಳ ಪ್ರಕಾರ ರಣವೀರ್ ಸಿಂಗ್ ಕೊರೊನಾ ಸಂದರ್ಭದಲ್ಲಿ 9 ಹೊಸ ಬ್ರಾಂಡ್ ಗೆ ಸಹಿ ಮಾಡಿದ್ದಾರೆ.
ರಣವೀರ್ ಸಿಂಗ್ ಒಂದು ಬ್ರಾಂಡ್ ಗೆ 7ರಿಂದ 12 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ. ಈ ಮೂಲಕ ರಣವೀರ್ ಸಿಂಗ್ ಸುಮಾರು 70 ಕೋಟಿ ಗಳಿಸುತ್ತಿದ್ದಾರೆ. ಈಗ ರಣವೀರ್ ಬ್ರಾಂಡ್ ಸಂಖ್ಯೆ 34ಕ್ಕೆ ಏರಿಕೆ ಕಂಡಿದೆ. ಬ್ರಾಂಡ್ ಮಾತ್ರವಲ್ಲ ರಣವೀರ್ ಕೈನಲ್ಲಿ ಸಾಕಷ್ಟು ಚಿತ್ರಗಳಿವೆ. 83, ಜಯೇಶ್ ಭಾಯ್ ಜೋರ್ದಾರ್, ಸರ್ಕಸ್ ನಂತಹ ಚಿತ್ರಗಳಿವೆ. ಇದಲ್ಲದೆ ಇನ್ನೂ ಎರಡು ಮೆಗಾ ಬಜೆಟ್ ಚಿತ್ರಗಳು ಅವ್ರ ಕೈನಲ್ಲಿದ್ದು, ಇದ್ರ ಬಗ್ಗೆ ಶೀಘ್ರವೇ ಘೋಷಣೆ ಮಾಡಲಿದ್ದಾರೆ.
ಕಂಗನಾ ರಣಾವತ್ ಈ ಸಿನಿಮಾ ಶೂಟಿಂಗ್ಗೆ ವ್ಯಯಿಸಿದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ..!
ರಣವೀರ್ ಯಂಗ್ ಸೂಪರ್ ಸ್ಟಾರ್. ಇದೇ ಕಾರಣಕ್ಕೆ ನಿರ್ಮಾಪಕರಿಂದ ಹಿಡಿದು ದೊಡ್ಡ ಬ್ರಾಂಡ್ ಗಳು ಆಕರ್ಷಿತವಾಗಿವೆ. ರಣವೀರ್ ಪ್ರಸಿದ್ಧಿ ಸಮಯಕ್ಕೆ ತಕ್ಕಂತೆ ಹೆಚ್ಚಾಗ್ತಿದೆ. ಬ್ರಾಂಡ್, ಚಿತ್ರಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ರಣವೀರ್ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವ್ರ ಫಾಲೋವರ್ಸ್ ಸಂಖ್ಯೆ 6 ಕೋಟಿಗಿಂತ ಹೆಚ್ಚಿದೆ.