ಶ್ವಾನಗಳು ತಮ್ಮ ಮಾಲೀಕರನ್ನ ಪ್ರೀತಿಸುವ ಬಗೆಗೆ ಬೇರೆ ಸಾಟಿಯಿಲ್ಲ. ತಮ್ಮ ಮಾಲೀಕನಿಗಾಗಿ ಜೀವ ಬಿಡೋಕೂ ಶ್ವಾನಗಳು ತಯಾರಿರ್ತಾವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಕಳೆದು ಹೋದ ಶ್ವಾನವೊಂದು ಮತ್ತೆ ತನ್ನ ಮಾಲೀಕನ ಜೊತೆ ಸೇರುವಲ್ಲಿ ಯಶಸ್ವಿಯಾಗಿದ್ದು ಬಹಳ ದಿನಗಳ ಬಳಿಕ ಮಾಲೀಕರನ್ನ ಕಂಡ ಶ್ವಾನ ವರ್ತಿಸಿದ ರೀತಿ ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ.
ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಈ ಶ್ವಾನವು ಮಾಲೀಕರಿಂದ ದೂರಾಗಿತ್ತು. ಸಂಸ್ಥೆಯೊಂದು ಶ್ವಾನ ಇರುವ ಬಗ್ಗೆ ಮಹಿಳೆಗೆ ಮಾಹಿತಿ ನೀಡಿತ್ತು. ಕೂಡಲೇ ಆ ಕೇಂದ್ರಕ್ಕೆ ಭೇಟಿ ನೀಡಿದ ಮಹಿಳೆ ತನ್ನ ನಾಯಿಯನ್ನ ಪ್ರೀತಿಯಿಂದ ಕರೆದಿದ್ದಾಳೆ.
ಓಡೋಡಿ ಬಂದ ಶ್ವಾನ ಆಕೆಯನ್ನ ನೆಕ್ಕಿ ನೆಕ್ಕಿ ಪ್ರೀತಿ ಮಾಡಿದೆ. ಅದರ ಪ್ರೇಮವನ್ನ ಕಂಡ ಮಾಲೀಕೆ ಹಾಗೂ ನೆರೆದವರೆಲ್ಲರ ಕಣ್ಣಂಚು ಒದ್ದೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಸಖತ್ ವೈರಲ್ ಆಗಿದೆ.
https://twitter.com/i/status/1357627443188744195