1. ಯಾರಿಗೂ ಕೂಡ ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿ, ಕಾರ್ಡ್ ವಿವರ, ಸಿವಿವಿ ಹಾಗೂ ಒಟಿಪಿ ಶೇರ್ ಮಾಡುವಂತಿಲ್ಲ.
2. ಗೊತ್ತೇ ಇರದ ಲಿಂಕ್ಗಳನ್ನ ಕುತೂಹಲಕ್ಕೆಂದೂ ಎಂದಿಗೂ ತೆರೆಯದಿರಿ. ಮೊದಲು ಮೆಸೇಜ್ನ ಸರಿಯಾಗಿ ಓದಿ ಅದು ಎಸ್ಬಿಐನಿಂದಲೇ ಬಂದಿದೆ ಎಂದು ಖಾತ್ರಿಯಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಿ.
3. ನೀವು ಎಟಿಎಂ ಬಳಕೆ ಮಾಡುವ ವೇಳೆ ನಿಮ್ಮ ಹಿಂದೆ ಯಾರಾದರೂ ನಿಂತಿರೋದು ಗಮನಕ್ಕೆ ಬಂದಲ್ಲಿ, ಕೀಪ್ಯಾಡ್ನ್ನು ಕವರ್ ಮಾಡಿಕೊಂಡು ನಿಮ್ಮ ಎಟಿಎಂ ಪಿನ್ ನಮೂದಿಸಿ.
4. ನಿಮ್ಮ ಎಸ್ಬಿಐ ಕಾರ್ಡ್ ಮೇಲೆ ಎಂದಿಗೂ ಪಾಸ್ವರ್ಡ್ನ್ನು ಬರೆದಿಡಬೇಡಿ.
5. ನಿಮ್ಮ ಜನ್ಮದಿನಾಂಕಕ್ಕೆ ಹೋಲುವಂತಹ ಅಂಕಿಗಳನ್ನ ಎಟಿಎಂ ಪಿನ್ ಮಾಡಿಕೊಳ್ಳಬೇಡಿ.