ನ್ಯೂಯಾರ್ಕ್: ಅಜರಾಮರರಾಗಬೇಕು ಎಂಬುದು ಹೆಚ್ಚಿನ ಹುಲು ಮಾನವರ ಬಯಕೆ. ಮುಪ್ಪೇ ಬರಬಾರದು ಎಂದು ಪುರಾಣ ಕಾಲದಲ್ಲಿ ತಪಸ್ಸು ಮಾಡಿ ದೇವರಿಂದ ವರ ಪಡೆದವರನ್ನು ಕೇಳಿದ್ದೇವೆ. ಆದರೆ, ಈಗ ಕಲಿಯುಗ. ದೇವರನ್ನು ಒಲಿಸಿಕೊಳ್ಳುವುದು ಕಷ್ಟ. ಇದರಿಂದ ಅಮೆರಿಕಾದ ಉದ್ಯಮಿಯೊಬ್ಬ 180 ವರ್ಷ ಬದುಕಬೇಕು ಎಂಬ ತನ್ನ ಬಯಕೆಯನ್ನು ಈಡೇರಿಸಲು ಏನೆಲ್ಲ ಸಾಹಸ ಮಾಡುತ್ತಿದ್ದಾನೆ.
ಡೇವ್ ಆಸ್ಪ್ರೆಯ್ ಎಂಬ 47 ವರ್ಷದ ಉದ್ಯಮಿಗೆ ತಾನು 2153 ನೇ ಇಸವಿಯವರೆಗೆ ಎಂದರೆ, ತಾನು 180 ವರ್ಷದವರೆಗೆ ಬದುಕಬೇಕು ಎಂಬ ಬಯಕೆ ಇದೆ. ಇದರಿಂದ ಇದುವರೆಗೆ 1 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾನೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾಂಕ್ರೀಟ್‌ಗಿಂತ ಗಟ್ಟಿಯಾದ ಇಟ್ಟಿಗೆ ಸಿದ್ದ
ಒಮ್ಮೆ ತಿಂಡಿ ತಿಂದ ನಂತರ ಮತ್ತೊಂದು ಉಪಹಾರಕ್ಕೆ ಹೆಚ್ಚಿನ ಅಂತರ ಇರುವಂತೆ ನೋಡಿಕೊಳ್ಳುತ್ತಿದ್ದಾನೆ. ತನ್ನ ಬೋನ್ ಮ್ಯಾರೋಗಳನ್ನು ಸಂರಕ್ಷಿಸಿದ್ದಾನೆ. ಸೆಲ್ಸ್ ಗಳನ್ನು ಸಂರಕ್ಷಿಸಿದ್ದಾನೆ. ವಯಸ್ಸಾಗದೇ ಇರುವ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೋಲ್ಡ್ ಥೆರಪಿ ಮಾಡುತ್ತಿದ್ದಾನೆ. ಕಳೆದ 10 ವರ್ಷದಿಂದ ತಣ್ಣೀರು ಸ್ನಾನ ಮಾಡುತ್ತಿದ್ದಾನೆ.
“ಜಗತ್ತಿನಲ್ಲಿ ಏನೇನಾಗುತ್ತದೆ ಎಂದು ನೋಡುವ ಕುತೂಹಲ ನನಗಿದೆ. ಇದರಿಂದ ಈ ಕಸರತ್ತು ನಡೆಸಿದ್ದೇನೆ” ಎಂದು ಉದ್ಯಮಿ ಡೇವ್, ಐ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.