‘ಕೊರೊನಾ’ ಲಸಿಕೆ ಸ್ವೀಕರಿಸುತ್ತಿದ್ದಂತೆಯೇ ಬದಲಾಯ್ತು ಭಾಷೆ…! 06-02-2021 7:57AM IST / No Comments / Posted In: Corona, Corona Virus News, Latest News, India ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತವೆ. ಈ ಸಾಲಿಗೆ ಇದೀಗ ಇನ್ನೊಂದು ವಿಚಿತ್ರ ವಿಡಿಯೋ ಸೇರ್ಪಡೆಯಾಗಿದೆ. ಕೊರೊನಾ ಲಸಿಕೆಯನ್ನ ಪಡೆದ ವ್ಯಕ್ತಿ ತನ್ನ ಅನುಭವವನ್ನ ಹಂಚಿಕೊಳ್ತಾ ಇರ್ತಾನೆ. ಆದರೆ ಅಚಾನಕ್ ಆಗಿ ಅವನ ಧ್ವನಿ ಬದಲಾಗೋದು ಮಾತ್ರವಲ್ಲದೇ ಭಾಷೆಯೂ ಕೂಡ ಬದಲಾಗಿದೆ. ಈ ವಿಡಿಯೋವನ್ನ ಉದ್ಯಮಿ ಹರ್ಷ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಕಡೆ ಸಿರೀಂಜ್ನ ಫೋಟೋ ಹಾಗೂ ಮತ್ತೊಂದು ಕಡೆ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬನ ಫೋಟೋ ಇದೆ. ವ್ಯಕ್ತಿಯ ಧ್ವನಿ ಬದಲಾಗುತ್ತಿದ್ದಂತೆ ಆ ಜಾಗದಲ್ಲಿ ವೃದ್ಧೆಯ ಫೋಟೋ ಕಾಣಿಸುತ್ತೆ. ವಿಡಿಯೋದಲ್ಲಿ ವ್ಯಕ್ತಿ, ಕೊರೊನಾ ಲಸಿಕೆಯನ್ನ ಹಾಕಿದ ಬಳಿಕ ನನಗೆ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಹೇಳುತ್ತಿರುತ್ತಾನೆ. ಆದರೆ ಹಾಗೆ ಹೇಳಿದ ಕೆಲವೇ ನಿಮಿಷಗಳಲ್ಲಿ ಆತನ ಧ್ವನಿ ಹಾಗೂ ಭಾಷೆ ಬದಲಾದ ರೀತಿಯಲ್ಲಿ ವಿಡಿಯೋವನ್ನ ತಯಾರಿಸಲಾಗಿದೆ. ಈ ವಿಡಿಯೋವನ್ನ ಶೇರ್ ಮಾಡಿರುವ ಹರ್ಷ ಗೋಯೆಂಕಾ ಚೀನಿ ಲಸಿಕೆಯ ಪ್ರಭಾವ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಇದೊಂದು ವೈರಲ್ ವಿಡಿಯೋ ಆಗಿದ್ದು ಇಂತಹ ಯಾವುದೇ ಪ್ರಕರಣ ಈವರೆಗೆ ಬೆಳಕಿಗೆ ಬಂದಿಲ್ಲ. Effect of the Chinese vaccine….😀😀😀 pic.twitter.com/1rzPzpc3IM — Harsh Goenka (@hvgoenka) February 4, 2021