ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ರೈತರು ನಡೆಸುತ್ತಿರುವ ಸುದೀರ್ಘ ಪ್ರತಿಭಟನೆ ದಿನಕ್ಕೊಂದು ಆಯಾಮವನ್ನ ಪಡೆದುಕೊಳ್ತಿದೆ. ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರದ ಘಟನೆ ಮಾಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಹಾಗೂ ಸ್ವದೇಶಿ ಸೆಲೆಬ್ರಿಟಿಗಳ ವಾರ್ ಜೋರಾಗಿದೆ.
ಪಾಪ್ ತಾರೆ ರಿಹನ್ನಾ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಟ್ವೀಟ್ ಮಾಡುತ್ತಿದ್ದಂತೆಯೇ ಈ ರೈತ ಪ್ರತಿಭಟನೆ ಇನ್ನೊಂದು ದಿಕ್ಕನ್ನೇ ಪಡೆದುಕೊಂಡಿದೆ. ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ನ ವಿವಾದಿತ ಟ್ವೀಟ್ ಕೂಡ ರೈತ ಪ್ರತಿಭಟನೆಯ ಹಿಂದಿರುವ ಅನೇಕರ ಸಂಚನ್ನ ಬಯಲಿಗೆಳೆಯುತ್ತಿದೆ. ಆದರೆ ಈ ಎಲ್ಲದರ ನಡುವೆ ವಿದೇಶಿಗರ ಬೆಂಬಲವನ್ನ ಪ್ರತಿಭಟನಾನಿರತ ರೈತರು ಸ್ವಾಗತಿಸುತ್ತಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್ನಗರದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ 51 ವರ್ಷದ ರಾಕೇಶ್ ಟಿಕೈಟ್, ರಿಹನ್ನಾ ಹಾಗೂ ಗ್ರೇಟಾ ಥನ್ಬರ್ಗ್ರ ಬೆಂಬಲವನ್ನ ಸ್ವಾಗತಿಸಿದ್ದಾರೆ. ನನಗೆ ಇವರ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಅವರೆಲ್ಲ ಬೆಂಬಲ ಸೂಚಿಸಿದ್ದಿರಬಹುದು. ಆದರೆ ನನಗೆ ಅವರೆಲ್ಲ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.