ಮನೆಯಲ್ಲಿ ಅವರೆಕಾಳು ಇದ್ದರೆ ಬೆಳಿಗ್ಗಿನ ತಿಂಡಿಗೆ ರುಚಿಯಾದ ಪಲಾವ್ ಮಾಡಿಕೊಂಡು ತಿನ್ನಿ, ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಚಕ್ಕೆ-1, ಲವಂಗ-3, ಪಲಾವ್ ಎಲೆ-1, ಅರಶಿನ-1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಈರುಳ್ಳಿ-1, ಶುಂಠಿ ಬೆಳ್ಳುಳ್ಳಿ ಪೇಸ್ಟ್ -1 ಚಮಚ, ಎಣ್ಣೆ-2 ಚಮಚ, ಖಾರದ ಪುಡಿ-1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಅಕ್ಕಿ-1/2ಕಪ್, ಅವರೆ ಕಾಳು -1 ಕಪ್.
ಮಾಡುವ ವಿಧಾನ: ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಮೇಲೆ ಚಕ್ಕೆ, ಲವಂಗ ಪಲಾವ್ ಎಲೆ ಹಾಕಿ. ನಂತರ ಅರಶಿನ, ಜೀರಿಗೆ ಸೇರಿಸಿ. ಈರುಳ್ಳಿ ಸೇರಿಸಿ ಕಂದುಬಣ್ಣ ಬರುವವರೆಗೆ ಹುರಿಯಿರಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಂಡು ಹಸಿ ಅವರೆಕಾಳು ಹಾಕಬೇಕು ನಂತರ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ.
ರುಚಿ ರುಚಿಯಾದ ರವೆ ‘ಟೋಸ್ಟ್’ ರೆಸಿಪಿ
ನಂತರ ನೆನೆಸಿಟ್ಟುಕೊಂಡ 1 ಕಪ್ ಅಕ್ಕಿ ಹಾಕಿ ಅದರ ನೀರಿನ ಪಸೆ ಆರಿ ಹೋಗುವವರೆಗೂ ತುಸು ಫ್ರೈ ಮಾಡಿ ಕೊಂಡು 2 ಕಪ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಎರಡು ವಿಷಲ್ ಕೂಗಿಸಿಕೊಂಡರೆ ರುಚಿಯಾದ ಪಲಾವ್ ರೆಡಿ.