ಬೆಂಗಳೂರು: ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ವ್ಯವಸ್ಥೆಗೆ ಅನುವು ಮಾಡಿದರೂ ರಾಜ್ಯ ಸರ್ಕಾರ ಶೇ.50 ರಷ್ಟು ಅವಕಾಶ ನೀಡುವುದಾಗಿ ಹೇಳಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕುರಿತು ನಟ ಧ್ರುವ ಸರ್ಜಾ ಶೇರ್ ಮಾಡಿದ್ದ ಒಂದು ವಿಡಿಯೋ ಇಡೀ ಕನ್ನಡ ಚಿತ್ರರಂಗವೇ ರಾಜ್ಯ ಸರ್ಕಾರದ ಮೇಲೆ ಮುಗಿಬೀಳುವಂತೆ ಮಾಡಿತ್ತು. ಎಚ್ಚೆತ್ತ ಸರ್ಕಾರ ಶೇ.100ರಷ್ಟು ಆಸನ ವ್ಯವಸ್ಥೆಗೆ ಅನುವು ಮಾಡಿಕೊಡುವುದಾಗಿ ಘೋಷಿಸಿತ್ತು.
ಸ್ಟಾರ್ ಸಿಂಗರ್ ರಿಹನ್ನಾ ಕಮೆಂಟ್ ಬಗ್ಗೆ ತಿರುಗಿ ನಿಂತ ಬಾಲಿವುಡ್ ತಾರೆಯರು
ಇದೇ ವಿಚಾರವಾಗಿ ಇದೀಗ ಧನ್ಯವಾದ ತಿಳಿಸಿರುವ ನಟ ಧ್ರುವ ಸರ್ಜಾ ಮತ್ತೊಂದು ವಿಡಿಯೋ ಶೇರ್ ಮಾಡಿದ್ದು, ನನ್ನ ಮನಸ್ಸಿನಲ್ಲಿದ್ದ ಆತಂಕವನ್ನು ನಾನು ನಿನ್ನೆ ಎಲ್ಲರ ಜೊತೆ ಹಂಚಿಕೊಂಡಿದ್ದೆ. ಅದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಹಕಾರ ಸಿಗುತ್ತೆ ಎಂದುಕೊಂಡಿರಲಿಲ್ಲ. ಎಲ್ಲರಿಗೂ ಧನ್ಯವಾದ ನನ್ನ ಚಿತ್ರ ಮಾತ್ರವಲ್ಲ ಎಲ್ಲಾ ಚಿತ್ರಗಳನ್ನು ಸಿನಿ ರಸಿಕರು ಚಿತ್ರಮಂದಿರಕ್ಕೆ ಹೋಗಿ ನೋಡಿ ಎಂದು ಮನವಿ ಮಾಡಿದ್ದಾರೆ.
https://www.instagram.com/tv/CK3Wpl8Hd5G/?utm_source=ig_web_copy_link