ಅಂತಾರಾಷ್ಟ್ರೀಯ ಪಾಪ್ ತಾರೆ ರಿಹನ್ನಾ ಕಳೆದ ಕೆಲ ದಿನಗಳಿಂದ ಟ್ರೆಂಡ್ನಲ್ಲಿದ್ದಾರೆ. ರೈತ ಪ್ರತಿಭಟನೆಯ ವಿಚಾರವಾಗಿ ಟ್ವೀಟ್ ಮಾಡುವ ಮೂಲಕ ರಿಹನ್ನಾ ಭಾರತೀಯರ ಮನ ಗೆದ್ದಿದ್ದಾರೆ.
ಹರಿಯಾಣದಲ್ಲಿ ಇಂಟರ್ನೆಟ್ ಬಂದ್ ಮಾಡಿರುವ ಬಗ್ಗೆ ಸಿಎನ್ಎನ್ ವರದಿಯನ್ನ ಶೇರ್ ಮಾಡಿದ ರಿಹನ್ನಾ ನಾವೇಕೆ ಇದರ ಬಗ್ಗೆ ಮಾತನಾಡಬಾರದು ಎಂದು ಟ್ವೀಟ್ ಮಾಡಿದ್ದರು.
ಈಕೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೇ ಲೈಕ್ ಸಂಪಾದಿಸಿತ್ತು.
ಅಂದಹಾಗೆ ರಿಹನ್ನಾ ಕೆರಿಬಿಯನ್ ರಾಷ್ಟ್ರವಾದ ಬಾರ್ಬಡೋಸ್ನ ಪಾಪ್ ಗಾಯಕಿ ಹಾಗೂ ಉದ್ಯಮಿ. 15ನೇ ವರ್ಷದಿಂದ ಸಂಗೀತ ಲೋಕಕ್ಕೆ ಕಾಲಿಟ್ಟ ರಿಹನ್ನಾ 2005ರಲ್ಲಿ ಮೊದಲ ಆಲ್ಬಮ್ ಮ್ಯೂಸಿಕ್ನ್ನು ಬಿಡುಗಡೆ ಮಾಡಿದ್ದರು.
2007ರಲ್ಲಿ ರಿಲೀಸ್ ಆದ ಗುಡ್ ಗರ್ಲ್ ಗೋನ್ ಬ್ಯಾಡ್ ಆಲ್ಬಮ್ ಮೂಲಕ ರಿಹನ್ನಾ ಸಖತ್ ಫೇಮಸ್ ಆಗಿದ್ದರು. ಈಕೆಯ ಅಂಬ್ರೆಲ್ಲಾ ಆಲ್ಬಂ ಮೊದಲ ಗ್ರ್ಯಾಮಿ ಅವಾರ್ಡ್ ತಂದುಕೊಟ್ಟಿದೆ.
ಅನ್ಫೇಥ್ಪುಲ್ಲ್, ಡೋಂಟ್ ಸ್ಟಾಪ್ ದ ಮ್ಯೂಸಿಕ್, ವಾಟ್ಸ್ ಮೈ ನೇಮ್..? , ಡೈಮಂಡ್ಸ್, ವರ್ಕ್, ರೇಟೆಡ್ ಆರ್, ಲೌಡ್, ಟಾಕ್ ದೆಟ್ ಟಾಕ್ ಹಾಗೂ ಅನ್ಅಪೋಲೋಜೆಟಿಕ್ ಈಕೆಗೆ ಹೆಸರು ತಂದುಕೊಟ್ಟ ಆಲ್ಬಂಗಳಾಗಿವೆ.
9 ಗ್ರ್ಯಾಮಿ ಅವಾರ್ಡ್ ಸೇರಿದಂತೆ 32 ವರ್ಷದ ಗಾಯಕಿ ಸಾಕಷ್ಟು ಪ್ರಶಸ್ತಿಗಳನ್ನ ಬಾಚಿಕೊಂಡಿದ್ದಾರೆ. 13 ಅಮೆರಿಕದ ಸಂಗೀತ ಲೋಕದ ಪ್ರಶಸ್ತಿ, 12 ಬಿಲ್ಬೋರ್ಡ್ ಸಂಗೀತ ಪ್ರಶಸ್ತಿ ಹಾಗೂ 6 ಗಿನ್ನೆಸ್ ದಾಖಲೆಯನ್ನ ಮಾಡಿದ್ದಾರೆ.
2012 ಹಾಗೂ 2014ರಲ್ಲಿ ಫೋರ್ಬ್ಸ್ ಸಮೀಕ್ಷೆ ಪ್ರಕಾರ ರಿಹನ್ನಾ ಟಾಪ್ 10 ಅತಿ ಹೆಚ್ಚು ಹಣ ಗಳಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2012 ಹಾಗೂ 2018ರಲ್ಲಿ ಟೈಮ್ಸ್ ಮ್ಯಾಗ್ಜಿನ್ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.