ಸುಜುಕಿ ಮೋಟಾರ್ಸೈಕಲ್ ಇಂಡಿಯಾ ತನ್ನ ಪ್ರಖ್ಯಾತ ಬೈಕ್ ಶ್ರೇಣಿಯಾದ ಜಿಕ್ಸರ್ 250 ಹಾಗೂ ಜಿಕ್ಸರ್ ಎಸ್ಎಫ್ 250ಯ ದರವನ್ನ ಏರಿಕೆ ಮಾಡಿದೆ. ಪ್ರತಿ ಮಾಡೆಲ್ನ ಬೆಲೆ 2,073 ರೂಪಾಯಿ ಏರಿಕೆ ಕಂಡಿದೆ. ದರ ಏರಿಕೆಯ ಬಳಿಕ ಸುಜುಕಿ ಜಿಕ್ಸರ್ 250ಯ ಪ್ರಸ್ತುತ ಬೆಲೆ 1,67,700 ರೂಪಾಯಿಯಾದ್ರೆ ಜಿಕ್ಸರ್ ಎಸ್ಎಫ್ 250ಯ ದರ 1,79,200 ರೂಪಾಯಿಯಾಗಿದೆ. ದರ ಏರಿಕೆ ಒಂದನ್ನ ಹೊರತುಪಡಿಸಿದ್ರೆ ಬೈಕ್ನ ಮಾಡೆಲ್ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಬಿಎಸ್6 ಜಿಕ್ಸರ್ 250 ಶ್ರೇಣಿಯಲ್ಲಿ ಅದೇ 249 ಸಿಸಿ ಇಂಜಿನ್ ಇರಲಿದೆ. ಸಿಂಗಲ್ ಓವರ್ಹೆಡ್ ಕ್ಯಾಮ್, ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಇರಲಿದೆ. ಎಂಜಿನ್ನ್ನು ಸಿಕ್ಸ್ ಸ್ಪೀಡ್ ಗಿಯರ್ ಬಾಕ್ಸ್ ಜೊತೆ ಹೊಂದಿಸಲಾಗಿದೆ.
ಕಳೆದ ತಿಂಗಳು ಮಾರುತಿ ಸುಜುಕಿ ಎಕ್ಸೆಸ್ 125 ಸ್ಕೂಟರ್ ಹಾಗೂ ಇಂಟ್ರೂಡರ್ 155 ಕ್ರೂಸರ್ ಮೋಟಾರ್ ಸೈಕಲ್ನ ದರದಲ್ಲಿ ಕೇವಲ 186 ರೂಪಾಯಿ ಏರಿಕೆ ಮಾಡಿತ್ತು. ಈ ಮಾಡೆಲ್ ಕೂಡ ದರ ಏರಿಕೆ ಒಂದನ್ನ ಹೊರತುಪಡಿಸಿದ್ರೆ ಮತ್ಯಾವುದೇ ಬದಲಾವಣೆ ಕಂಡಿಲ್ಲ.