ಹೆಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಫೆಬ್ರವರಿ 3 ಮತ್ತು ನಾಲ್ಕರಂದು ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್ ಸೇವೆಯಲ್ಲಿ ಅಡೆತಡೆಯಾಗಲಿದೆ ಎಂದು ಬ್ಯಾಂಕ್, ಗ್ರಾಹಕರಿಗೆ ಸಂದೇಶ ರವಾನೆ ಮಾಡಿದೆ.
ನಿರ್ವಹಣೆ ಕಾರಣಕ್ಕೆ ಫೆಬ್ರವರಿ 4ರಂದು ಮಧ್ಯಾಹ್ನ 12.30ರಿಂದ ಸಂಜೆ 5 ಗಂಟೆಯವರೆಗೆ ಡೆಬಿಟ್ ಕಾರ್ಡ್ ಸೇವೆ ಬಂದ್ ಆಗಿರಲಿದೆ. ಈ ಸಮಯದಲ್ಲಿ ಗ್ರಾಹಕರು ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಕೂಡ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆದಷ್ಟು ಆನ್ಲೈನ್ ವಹಿವಾಟನ್ನು ಈ ಸಂದರ್ಭದಲ್ಲಿ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ.
SBI ಗ್ರಾಹಕರಿಗೆ ಬಂಪರ್ ಆಫರ್: ಈ ವಹಿವಾಟುಗಳ ಮೇಲೆ ಸಿಗಲಿದೆ ಶೇ.50 ರಷ್ಟು ರಿಯಾಯಿತಿ
ನಿನ್ನೆ ರಾತ್ರಿಯಿಂದಲೇ ಸಮಸ್ಯೆ ಶುರುವಾಗಿದೆ. ರಾತ್ರಿ 2 ಗಂಟೆಯಿಂದೆ ಮೂರು ಗಂಟೆಯವರೆಗೆ ಕ್ರೆಡಿಟ್ ಕಾರ್ಡ್ ಬಳಸಲು ಸಾಧ್ಯವಾಗಲಿಲ್ಲ. ಆರ್ ಬಿ ಐ, ಆಡಿಟ್ ನಡೆಸುತ್ತಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 30 (1) ಬಿ ಅಡಿಯಲ್ಲಿ, ಆರ್‌ಬಿಐ ಬ್ಯಾಂಕಿನ ಸಂಪೂರ್ಣ ಐಟಿ ನೆಟ್‌ವರ್ಕ್ ಅನ್ನು ಲೆಕ್ಕ ಪರಿಶೋಧಿಸುತ್ತಿದೆ. ಇದಕ್ಕಾಗಿ ಬಾಹ್ಯ ವೃತ್ತಿಪರ ಐಟಿ ಸಂಸ್ಥೆಯನ್ನು ನೇಮಿಸಲಾಗಿದೆ.