
ಇನ್ಮುಂದೆ ದೇಶದಲ್ಲಿ ಬಂಗಾರದ ವಿನಿಮಯ ನಡೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ-ಖರೀದಿ ನಡೆಯುವಂತೆ ಬಂಗಾರ ಖರೀದಿ ಹಾಗೂ ಮಾರಾಟ ನಡೆಯಲಿದೆ. ಹಣಕಾಸು ತಜ್ಞರು ಈ ನಿರ್ಧಾರ ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದಿದ್ದಾರೆ. ಇದು ದೇಶದ ಆರ್ಥಿಕ ಪರಿಸ್ಥಿತಿಯನ್ನು ಬದಲಿಸುವ ಸಾಧ್ಯತೆಯಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಬಂಗಾರದ ವಿನಿಮಯದ ಬಗ್ಗೆ ಘೋಷಣೆ ಮಾಡಿದ್ದಾರೆ. ಇದನ್ನು ಸೆಬಿ ನಿಯಂತ್ರಿಸಲಿದೆ. ಅಂದ್ರೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಇದ್ರ ವ್ಯವಹಾರ ನಡೆಸಲಿದೆ. ಇಲ್ಲಿ ಬಂಗಾರ ಮಾರಾಟ ಹಾಗೂ ಖರೀದಿ ನಡೆಯಲಿದೆ. ಇದ್ರಿಂದ ಬಂಗಾರದ ವ್ಯವಹಾರಕ್ಕೆ ಹೊಸ ರೂಪ ಸಿಗಲಿದೆ.
ಚಿನ್ನದ ಬಾಂಡ್ ಖರೀದಿದಾರರಿಗೆ ಗುಡ್ ನ್ಯೂಸ್: ಪ್ರತಿ ಗ್ರಾಂಗೆ 50 ರೂ. ವಿನಾಯಿತಿ
ಎಲ್ಲವೂ ಸರಿಯಿದ್ದ ಸಂದರ್ಭದಲ್ಲಿ ಹೂಡಿಕೆದಾರರು ಷೇರು ಖರೀದಿ-ಮಾರಾಟಕ್ಕೆ ಒಲವು ತೋರಿಸುತ್ತಾರೆ. ಆದ್ರೆ ವಿಶ್ವದ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಈ ಬಾರಿ ಬಜೆಟ್ ನಲ್ಲಿ ಚಿನ್ನ-ಬೆಳ್ಳಿಯ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಬಂಗಾರದ ಕಸ್ಟಮ್ ಸುಂಕವನ್ನು ಶೇಕಡಾ 12.5ರಿಂದ ಶೇಕಡಾ 7.5ಕ್ಕೆ ಇಳಿಕೆ ಮಾಡಿದೆ. ಬಜೆಟ್ ಘೋಷಣೆ ನಂತ್ರ ಬಂಗಾರದ ಬೆಲೆ 1,200 ರೂಪಾಯಿಯಷ್ಟು ಇಳಿಕೆಯಾಗಿದೆ.
ಮುಂದಿನ ವರ್ಷದೊಳಗೆ ಬಂಗಾರ ಎಕ್ಸ್ಚೇಂಜ್ ಶುರುವಾಗಲಿದೆ ಎಂದು ಅಂದಾಜಿಸಲಾಗ್ತಿದೆ. ಸರ್ಕಾರದ ಈ ಯೋಜನೆ ಯಶಸ್ವಿಯಾದ್ರೆ ಭಾರತೀಯರಿಗೆ ಮಾತ್ರವಲ್ಲ ವಿಶ್ವದ ಜನರಿಗೂ ಲಾಭವಾಗಲಿದೆ. ಭಾರತೀಯ ಗೋಲ್ಡ್ ಎಕ್ಸ್ಚೇಂಜ್ ನಲ್ಲಿ ವಿದೇಶಿಗರು ಹೂಡಿಕೆ ಮಾಡಲಿದ್ದಾರೆ. ಭಾರತಕ್ಕೆ ವಿದೇಶಿ ಮುದ್ರೆ ಸಿಗಲಿದೆ. ಸರ್ಕಾರಿ ಖಜಾನೆಗೆ ಲಾಭವಾಗಲಿದೆ. ಇದು ಭಾರತದ ಆರ್ಥಿಕತೆ ಮೇಲೆ ಪ್ರಭಾವ ಬೀರಲಿದೆ.