ಜೀವ ವೈವಿಧ್ಯತೆಯ ವಿವಿಧ ಆಯಾಮಗಳನ್ನು ಬಿಂಬಿಸುವ ಹಾಗೂ ಮೂಲಕ ಅತ್ಯಂತ ಜನಪ್ರಿಯತೆ ಪಡೆದಿರುವ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಜನವರಿ 31ರ ಇಂದಿನಿಂದ ಕನ್ನಡದಲ್ಲಿ ತನ್ನ ಪ್ರಸಾರ ಆರಂಭಿಸಿದೆ.
ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಈಗಾಗಲೇ ಇಂಗ್ಲಿಷ್ ಜೊತೆಗೆ ತಮಿಳು, ತೆಲುಗು, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು ಇದಕ್ಕೆ ಈಗ ಕನ್ನಡವೂ ಸೇರ್ಪಡೆಗೊಂಡಿದೆ.
ಗಣಿಯಲ್ಲಿತ್ತು ಬರೋಬ್ಬರಿ 378 ಕ್ಯಾರೆಟ್ ವಜ್ರ, ದಂಗಾಗುವಂತಿದೆ ಇದ್ರ ಬೆಲೆ
ಹಿಂದಿಯೇತರ ಪ್ರದೇಶಗಳ ಜನತೆ ಅತಿ ಹೆಚ್ಚು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುವ ಕಾರಣ ಅವರುಗಳಿಗೆ ಮಾತೃ ಭಾಷೆಯಲ್ಲಿಯೇ ಮಾಹಿತಿ ನೀಡಬೇಕೆಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ.