ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವ ರೀತಿಯಲ್ಲಿ ಮಾತನಾಡಿದ ಕಾರಣಕ್ಕೆ ಸ್ಟಾಂಡ್ ಅಪ್ ಕಮೆಡಿಯನ್ ಮುನಾವರ್ ಫರೂಕಿಗೆ ಮಧ್ಯ ಪ್ರದೇಶ ಹೈಕೋರ್ಟ್ ಬೇಲ್ ನೀಡಲು ನಿರಾಕರಿಸಿದ ಬಳಿಕ ಮತ್ತೊಬ್ಬ ಕಮೆಡಿಯನ್ ವೀರ್ ದಾಸ್ ಸಹ ಈ ಹಿಂದೆ ಅಧಿಕ ಪ್ರಸಂಗದ ಮಾತನ್ನಾಡಿ ಪೊಲೀಸರಿಂದ ವಾರ್ನಿಂಗ್ ಪಡೆದಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ’ಎ ಲಿಟಲ್ ಲೇಟ್ ವಿತ್ ಲಿಲ್ಲಿ ಸಿಂಗ್’ ಹೆಸರಿನ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ ವೀರ್ ದಾಸ್, ತಮ್ಮ ಕಾಮೆಡಿ ಶೋ ಒಂದರ ವೇಳೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಬಗ್ಗೆ ಹಾಸ್ಯ ಮಾಡಿದ್ದು ಅಲ್ಲಿದ್ದ ಪ್ರೇಕ್ಷರಲ್ಲಿ ಕೆಲವರಿಗೆ ಇಷ್ಟವಾಗಲಿಲ್ಲವಂತೆ. ಈ ಕಾರಣದಿಂದ ಪ್ರೇಕ್ಷಕರಲ್ಲಿ ಒಬ್ಬರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು ಎಂದಿದ್ದಾರೆ.
ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ
ಶೋನಲ್ಲಿ ಮಾತು ಮುಂದುವರೆಸಿದ ದಾಸ್, ಕೆಲ ದಿನಗಳ ಬಳಿಕ ಖುದ್ದು ತಾವೇ ಅಬ್ದುಲ್ ಕಲಾಂರನ್ನು ಭೇಟಿಯಾದಾಗ ಅವರಿಗೂ ಸಹ ತಮ್ಮ ಮೇಲಿನ ಜೋಕ್ ಇಷ್ಟವಾಗಿತ್ತೆಂದು ಹೇಳಿಕೊಂಡಿದ್ದಾರೆ. ಇಂದೋರ್ ಪೊಲೀಸರ ಅತಿಥಿಯಾಗಿರುವ ಮುನಾವರ್ ಫರೂಖಿಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತಿರುವ ದಾಸ್ಗೆ ಮತ್ತೊಬ್ಬ ಕಾಮಿಡಿಯನ್ ವರುಣ್ ಗ್ರೋವರ್ ಸಹ ಬೆಂಬಲ ಕೊಟ್ಟಿದ್ದಾರೆ.