ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ. ಜನರ ಮನಸ್ಸುಗಳ ಮೇಲೆ ಬಹಳ ಪ್ರಖರವಾಗಿ ಪ್ರಭಾವ ಬೀರಬಲ್ಲ ಮಾಧ್ಯಮವೆಂದರೆ ಸಿನೆಮಾ.
ಜನತೆಗೆ ಬಾಲಿವುಡ್ ಸಿನೆಮಾಗಳ ಮೇಲೆ ಇರುವ ಕ್ರೇಜ್ ಅನ್ನು ಬಳಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಅಪರಾಧಗಳ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಯಾವುದೇ ಮಹಿಳೆಯ ಸಮ್ಮತಿ ಇಲ್ಲದೇ ಆಕೆಯೊಂದಿಗೆ ಸದರದಿಂದ ನಡೆದುಕೊಳ್ಳಬಾರದು ಎಂಬ ಸಂದೇಶವನ್ನು ಬಾಲಿವುಡ್ನ ಸೂಪರ್ ಹಿಟ್ ಚಿತ್ರ ’ಢರ್’ ಚಿತ್ರದ ಸೀನ್ ಒಂದರ ಮೂಲಕ ತನ್ನ ಸಾಮಾಜಿಕ ಜಾಲತಾಣದ ವಾಲ್ನಲ್ಲಿ ಕೊಟ್ಟಿದೆ ಉ.ಪ್ರ. ಪೊಲೀಸ್.
ರೈತರ ಬೆಂಬಲಕ್ಕೆ ನಿಂತ ನಟಿ ಸ್ವರಾ ಭಾಸ್ಕರ್
ಚಿತ್ರದ ’ಜಾದೂ ತೇರೀ ನಝರ್’ ಹಾಡಿನ ಸಾಲುಗಳನ್ನು ಬಳಸಿಕೊಂಡಿರುವ ಉ.ಪ್ರ ಪೊಲೀಸ್ ರೋಮಿಯೋಗಳಿಗೆ ಬಲೇ ಖಡಕ್ ಸಂದೇಶ ರವಾನೆ ಮಾಡಿದೆ.